ಮನರಂಜನೆ
ಶ್ರೀಮುರಳಿ 'ರಥಾವರ' ಟ್ರೇಲರ್
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ರಥಾವರ' ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಶ್ರೀಮುರಳಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಸಿನೆಮಾದ ಟ್ರೇಲರ್ ಆಕ್ಷನ್ ದೃಶ್ಯಗಳಿಂದ ತುಂಬಿದ್ದು ಮುರಳಿ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಕಳೆದ ವರ್ಷ 'ಉಗ್ರಂ' ಸೂಪರ್ ಹಿಟ್ ಚಿತ್ರ ನೀಡಿದ ಮುರಳಿ ಆ ಯಶಸ್ಸನ್ನು ಮರುಕಳಿಸುವರೇ? ಡಿಸೆಂಬರ್ ೪ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
