ಮನರಂಜನೆ
ಮೂರ್ ಚಿತ್ರದ ಟ್ರೈಲರ್
ಹೆಂಡತಿಯನ್ನು ಕಳೆದುಕೊಂಡ ಓರ್ವ ರೈಲ್ವೇ ಸ್ಟೇಷನ್ ಮಾಸ್ಟರ್ ತನ್ನ ಸ್ಟೇಷನ್ ಅನ್ನು ತುಂಬಾ ಪ್ರೀತಿಸುತ್ತಿರುತ್ತಾನೆ. ಈ ನಡುವೆ ಆತನ ಸಹೋದರ ಭ್ರಷ್ಟಾಚಾರದಲ್ಲಿ ತೊಡಗುತ್ತಾನೆ. ಸಹೋದರನ ಸಂಪಾದನೆಯಲ್ಲಿ ಸ್ಟೇಷನ್ ಮಾಸ್ಟರ್ ವಿಲಾಸಿ ಜೀವನ ನಡೆಸಬಹುದಾಗಿರುತ್ತದೆಯಾದರೂ, ಅದೇ ಭ್ರಷ್ಟಾಚಾರ ತಾನು ಪ್ರೀತಿಸುತ್ತಿರುವ ರೈಲ್ವೇ ನಿಲ್ದಾಣಕ್ಕೆ ಎರವಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಟೇಷನ್ ಮಾಸ್ಚರ್ ಹೇಗೆ ಭ್ರಷ್ಟಾಚಾರದಿಂದ ನಿಲ್ದಾಣವನ್ನು ಹೇಗೆ ರಕ್ಷಿಸುತ್ತಾನೆ ಎಂಬುದೇ ಮೂರ್ ಚಿತ್ರದ ತಿರುಳು. ಈ ಚಿತ್ರ ಮಂಗಳವಾರ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ.
