ಮನರಂಜನೆ
"ಎ ಡೇ ಇನ್ ದಿ ಸಿಟಿ" ಕನ್ನಡ ಚಿತ್ರದ ಟ್ರೈಲರ್
ಬೆಂಗಳೂರು ನಗರದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಡೆಯುವ ಕಥೆ ಇದಾಗಿದ್ದು, ನಗರವೊಂದರ ದಿನಚರಿ ಮತ್ತು ಇದರಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಕುರಿತಾದ ಚಿತ್ರವೇ ಎ ಡೇ ಇನ್ ದಿ ಸಿಟಿ. ನಗರ ಪ್ರದೇಶದ ಸಮಸ್ಯೆಗಳನ್ನು ಎದುರಿಸಲು ರಾಜಕಾರಣಿಗಳು ಮತ್ತು ಸಾರ್ವಜನಿಕರು ಒಟ್ಟಿಗೆ ಸೇರಿ ಹೇಗೆ ಕೆಲಸ ಮಾಡಬೇಕಿದೆ ಎಂಬ ಅಂಶವನ್ನು ಚಿತ್ರದಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರವನ್ನು ವೆಂಕಟ್ ಭಾರದ್ವಾಜ್ ಅವರು ನಿರ್ದೇಶಿಸಿದ್ದು, ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
