ಮನರಂಜನೆ
ಹೋಮ್ ಸಿಕ್ ಚಿತ್ರದ ಟ್ರೈಲರ್
ಮಹತ್ವಾಕಾಂಕ್ಷೆಯ ಸೆಲ್ಲೋ ವಿದ್ಯಾರ್ಥಿನಿ ಜೆಸ್ಸಿಕಾ ಅಂತಾರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬರುತ್ತದೆ. ಆಕೆಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶವಾಗಿರುತ್ತದೆಯಾದರೂ, ತನ್ನ ವೈಯುಕ್ತಿಕ ಕಾರಣಗಳಿಂದಾಗಿ ಸಾಕಷ್ಟು ನೋವು ಅನುಭವಿಸುತ್ತಿರುತ್ತಾಳೆ. ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಏನೋ ಎಂಬ ಶಂಕೆ ನಿತ್ಯ ಆಕೆಯನ್ನು ಕೊಲ್ಲುತ್ತಿರುತ್ತದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಿಂದ ಜೆಸ್ಸಿಕಾ ಹೊರಬರುತ್ತಾಳೆಯೇ ಎಂಬುದರ ಕುರಿತಾದ ಚಿತ್ರವೇ "ಹೋಮ್ ಸಿಕ್". ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
