ಮನರಂಜನೆ
ಐ ಆ್ಯಮ್ ನೊಜೂಮ್, ಏಜ್ 10 ಅಂಡ್ ಡಿವೋರ್ಸ್ಡ್ ಚಿತ್ರದ ಟ್ರೈಲರ್
ಪೋಷಕರ ಒತ್ತಾಯಕ್ಕೆ ಮಣಿದು ತನ್ನ 10ನೇ ವರ್ಷದಲ್ಲಿಯೇ ಮದುವೆಯಾಗುವ ಪುಟ್ಟ ಬಾಲಕಿ ಕುರಿತಾದ ಚಿತ್ರವೇ ಐ ಆ್ಯಮ್ ನೊಜೂಮ್, ಏಜ್ 10 ಅಂಡ್ ಡಿವೋರ್ಸ್ಡ್. ಬಾಲ್ಯ ವಿವಾಹದಿಂದ ಸಾಕಷ್ಟು ತೊಂದರೆಗೀಡಾಗುವ ಪುಟ್ಟ ಬಾಲಕಿ ಅಂತಿಮವಾಗಿ ಗಂಡನಿಂದ ವಿಚ್ಚೇದನಕ್ಕೆ ಮುಂದಾಗುತ್ತಾಳೆ. ಬಾಲಕಿಯ ಈ ನಿರ್ಧಾರ ಆಕೆಯ ಗಂಡ ಸೇರಿದಂತೆ ಇಡೀ ಮೂಲಭೂತವಾದಿ ಸಮಾಜವೇ ಆಕೆಯತ್ತ ಒಂದು ಕ್ಷಣ ತಿರುಗಿ ನೋಡುವಂತೆ ಮಾಡುತ್ತದೆ. ಈ ಚಿತ್ರ ಬುಧವಾರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
