ಮನರಂಜನೆ

ಸಯಾಮಿ ಜೋಡಿಯ ಕಥೆಯುಳ್ಳ 'ಇಂಡಿವಿಸಬಲ್' ಇಂದು ಪ್ರದರ್ಶನ

ಸಯಾಮಿಯಾಗಿ ಹುಟ್ಟಿ ಬೆಳೆದ ಯುವ ಜೋಡಿಯನ್ನು ಬೇರ್ಪಡಿಸಲು ಸಾಧ್ಯ ಎಂದು ವೈದ್ಯರು ಹೇಳಿದಾಗ ಹುಟ್ಟುವ ಭಾವನೆಗಳೇನು ಎಂಬ ಕಥಾವಸ್ತು ಒಳಗೊಂಡಿರುವ ಇಟಾಲಿಯನ್ ಸಿನೆಮಾ 'ಇಂಡಿವಿಸಬಲ್' ಇಂದು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಅದರ ಟ್ರೇಲರ್ ಇಲ್ಲಿದೆ.

ಸಯಾಮಿ ಜೋಡಿಯ ಕಥೆಯುಳ್ಳ 'ಇಂಡಿವಿಸಬಲ್' ಇಂದು ಪ್ರದರ್ಶನ
ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಟ್ರೇಲರ್

ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಟ್ರೇಲರ್

ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಟ್ರೇಲರ್ ನೆನ್ನೆ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಟಿ ಎಸ್ ನಾಗಾಭರಣ, ಮಂಡ್ಯ ರಮೇಶ್ ಮತ್ತು ಅಪೂರ್ವ ಭಾರದ್ವಾಜ್ ನಟಿಸಿರುವ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೯ನೆ ಆವೃತ್ತಿಗೆ ಕೂಡ ಆಯ್ಕೆಯಾಗಿದೆ. ವಿ ಹರಿಕೃಷ್ಣ ಸಂಗೀತ ನೀಡಿರುವ ಚಿತ್ರದ ಆಡಿಯೋ ಕೂಡ ಈಗ ಬಿಡುಗಡೆಯಾಗಿದೆ.

9ನೇ BIFFES; ಪ್ರದರ್ಶನಗೊಳ್ಳಿರುವ 'ದ ಸೇಲ್ಸ್ ಮ್ಯಾನ್' ಇರಾನಿ ಚಿತ್ರದ ಟ್ರೇಲರ್

9ನೇ BIFFES; ಪ್ರದರ್ಶನಗೊಳ್ಳಿರುವ 'ದ ಸೇಲ್ಸ್ ಮ್ಯಾನ್' ಇರಾನಿ ಚಿತ್ರದ ಟ್ರೇಲರ್

ಇತ್ತೀಚೆಗಷ್ಟೇ ಟ್ರಂಪ್ ವಲಸೆ ನೀತಿಯನ್ನು ವಿರೋಧಿಸಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೋಗಲೊಲ್ಲೆ ಎಂದಿದ್ದ ಅಸಘರ್ ಫರ್ಹಾದಿ ನಿರ್ದೇಶನದ ಇರಾನಿ ಚಿತ್ರ 'ದ ಸೇಲ್ಸ್ ಮ್ಯಾನ್' ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರಮುಖ ಚಿತ್ರಗಳಲ್ಲಿ ಒಂದು.

ರಾಜಮೌಳಿ ತಂದೆ ವಿಜೇಂದ್ರಪ್ರಸಾದ್ ನಿರ್ದೇಶನದ ಶ್ರೀವಲ್ಲಿ ಚಿತ್ರದ ಟೀಸರ್

ರಾಜಮೌಳಿ ತಂದೆ ವಿಜೇಂದ್ರಪ್ರಸಾದ್ ನಿರ್ದೇಶನದ ಶ್ರೀವಲ್ಲಿ ಚಿತ್ರದ ಟೀಸರ್

ಬ್ಲಾಕ್ ಬಸ್ಟರ್ ಚಿತ್ರಗಳಾದ ಬಾಹುಬಲಿ ಮತ್ತು ಭಜರಂಗಿ ಬಾಯಿಜಾನ್ ಚಿತ್ರಗಳಿಗೆ ಕಥೆ ಬರೆದಿದ್ದ ವಿ ವಿಜೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಶ್ರೀವಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಶ್ರೀವಲ್ಲಿ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಜತ್ ಮತ್ತು ನೇಹಾ ನಟಿಸಿದ್ದಾರೆ.

ಅಕ್ಷಯ ಕುಮಾರ್ 'ಜಾಲಿ ಎಲ್ ಎಲ್ ಬಿ 2' ಟ್ರೇಲರ್

ಅಕ್ಷಯ ಕುಮಾರ್ 'ಜಾಲಿ ಎಲ್ ಎಲ್ ಬಿ 2' ಟ್ರೇಲರ್

ನಿಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಅಕ್ಷಯ್ ಕುಮಾರ್ ನಟನೆಯ 'ಜಾಲಿ' ಸಿನೆಮಾದ ಎರಡನೇ ಭಾಗ 'ಜಾಲಿ ಎಲ್ ಎಲ್ ಬಿ 2' ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಸುಭಾಷ್ ಕಪೂರ್ ನಿರ್ದೇಶನದ ಈ ಸಿನೆಮಾದಲ್ಲಿ ಅಕ್ಷಯ್ ಕುಮಾರ್, ಹುಮಾ ಖುರೇಷಿ, ಅನ್ನು ಕಪೂರ್ ಮತ್ತು ಸೌರಭ್ ಶುಕ್ಲ ನಟಿಸಿದ್ದು ಫೆಬ್ರವರಿ 10 ರಂದು ಬಿಡುಗಡೆಯಾಗಲಿದೆ.