ಮನರಂಜನೆ

ದಿ ಘಾಜಿ ಅಟ್ಯಾಕ್ ಚಿತ್ರದ ಟ್ರೈಲರ್

ರಾಣಾ ದಗ್ಗುಬಾಟಿ ಅಭಿನಯದ ದಿ ಘಾಜಿ ಅಟ್ಯಾಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದಿ ಘಾಜಿ ಅಟ್ಯಾಕ್ ಚಿತ್ರ ಜಲಾಂತರ್ಗಾಮಿ ನೌಕೆಗೆ ಸಂಬಂಧಪಟ್ಟ ಮೊದಲ ಚಿತ್ರವಾಗಿದೆ. ಅಂಡರ್ ವಾಟರ್ ವಾರ್ ಚಿತ್ರದ ಹೈಲೈಟ್ಸ್. 1971ರಲ್ಲಿ ಭಾರತ ಪಾಕಿಸ್ತಾನ ನಡುವೆ ನಡೆದಿದ್ದ ಯುದ್ಧದಲ್ಲಿ ಪಾಕಿಸ್ತಾನದ ಘಾಜಿ ಎಂಬ ಜಲಾಂತರ್ಗಾಮಿ ನೌಕೆಯನ್ನು ಭಾರತದ ಐಎನ್ಎಸ್ ರಜಪೂತ ನೌಕೆ ಹೊಡೆದುರುಳಿಸಿತ್ತು. ಭಾರತೀಯ ನೌಕೆ ಶೌರ್ಯ ಸಾರುವ ನೈಜ್ಯ ಕಥೆಯಾಧಾರಿತ ಚಿತ್ರ ದಿ ಘಾಜಿ ಅಟ್ಯಾಕ್.

ದಿ ಘಾಜಿ ಅಟ್ಯಾಕ್ ಚಿತ್ರದ ಟ್ರೈಲರ್
ಸಿಂಪಲ್ ಸುನಿ ಅವರ 'ಆಪರೇಶನ್ ಅಲಮೇಲಮ್ಮ' ಚಿತ್ರದ 2ನೇ ಟೀಸರ್

ಸಿಂಪಲ್ ಸುನಿ ಅವರ 'ಆಪರೇಶನ್ ಅಲಮೇಲಮ್ಮ' ಚಿತ್ರದ 2ನೇ ಟೀಸರ್

ಯೂಟರ್ನ್ ಚಿತ್ರ ಖ್ಯಾತಿಯ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ನಟ ರಿಶಿ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಆಪರೇಶನ್ ಅಲಮೇಲಮ್ಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚಿತ್ರವನ್ನು ಸ್ಟಾರ್ ಫಾಬ್ ಹಾಗೂ ಸೂನಿ ಸಿನಿಮಾಸ್ ಜತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ತಂದೆ-ಮಗಳ ಅವಿನಾಭಾವ ಸಂಬಂಧ; ಪುಷ್ಪಕ ವಿಮಾನ ಚಿತ್ರದ ಟ್ರೈಲರ್

ತಂದೆ-ಮಗಳ ಅವಿನಾಭಾವ ಸಂಬಂಧ; ಪುಷ್ಪಕ ವಿಮಾನ ಚಿತ್ರದ ಟ್ರೈಲರ್

ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಅವರ 100ನೇ ಚಿತ್ರ ಪುಷ್ಪಕ ವಿಮಾನ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವ ನಿರ್ದೇಶಕ ಎಸ್ ರವೀಂದ್ರನಾಥ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ಮಗಳಾಗಿ ಯುವಿನ ಪಾರ್ಥವಿ ಕಾಣಿಸಿಕೊಂಡಿದ್ದು, ರಚಿತ ರಾಮ್ ಮತ್ತು ಜೂಹಿ ಚಾವ್ಲ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಲೂಸ್ ಮಾದ ಯೋಗಿ ಅಭಿನಯದ ದುನಿಯಾ-2 ಟೀಸರ್ ಬಿಡುಗಡೆ

ಲೂಸ್ ಮಾದ ಯೋಗಿ ಅಭಿನಯದ ದುನಿಯಾ-2 ಟೀಸರ್ ಬಿಡುಗಡೆ

ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲೂಸ್ ಮಾದ ಯೋಗಿ ಇದೀಗ ದುನಿಯಾ-2 ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಯೋಗಿಯ ಗೆಟಪ್ ಹೇಗಿರಲಿದೆ ಎಂಬುದರ ಒಂದು ಝಲಕ್ ಇದೆ. ಚಿತ್ರವನ್ನು ಹರಿ ಎಂಬುವರು ನಿರ್ದೇಶಿಸುತ್ತಿದ್ದಾರೆ. ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ಸಾಥ್ ನೀಡಲಿದ್ದಾರೆ.

ವೈರಲ್ ಆಗ್ತಿದೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ವಿಡಿಯೋ ಸಾಂಗ್

ವೈರಲ್ ಆಗ್ತಿದೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ವಿಡಿಯೋ ಸಾಂಗ್

ಸ್ಯಾಂಡಲ್ವುಡ್ ನಟ, ನಿರ್ಮಾಪಕ ದ್ವಾರಕೀಶ್ ನಿರ್ಮಾಣದ ಚೌಕ ಚಿತ್ರ ಹಲವು ವಿಶೇಷತೆಗಳಿಂದ ಹೆಸರು ಮಾಡುತ್ತಿದ್ದು, ಇದೀಗ ಚಿತ್ರದಲ್ಲಿನ ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿ ಹರಿಕೃಷ್ಣ ಸಂಗೀತ ನೀಡಿರುವ ಯೋಗರಾಜ್ ಭಟ್ ಬರೆದಿರುವ ಟಿಪಿಕಲ್ ಸಾಹಿತ್ಯ ಹೊಂದಿರುವ ಅಲ್ಲಾಡ್ಸು ಅಲ್ಲಾಡ್ಸು ವಿಡಿಯೋ ಸಾಂಗ್ ಹೆಚ್ಚು ಜನಪ್ರಿಯವಾಗಿದೆ.

ಏಲಿಯನ್: ಕೊವೆನಂಟ್ ಚಿತ್ರದ ಟ್ರೈಲರ್

ಏಲಿಯನ್: ಕೊವೆನಂಟ್ ಚಿತ್ರದ ಟ್ರೈಲರ್

ಗ್ಲಾಡಿಯೆಟರ್ ಚಿತ್ರ ನಿರ್ದೇಶಕ ರಿಡ್ಲೆ ಸ್ಕಾಟ್ ನಿರ್ದೇಶನದ ಏಲಿಯನ್ಕೊವೆನಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೈಕಲ್ ಪಾಸ್ಬೊಂಡರ್, ಕಥ್ರೈನ್ ವಾಟರ್ಸ್ಟೊನ್, ಬಿಲ್ಲಿ ಕ್ರೂಡಪ್ ಡ್ಯಾನಿ ಮೈಕ್ಬ್ರಿಡ್ ನಟಿಸಿದ್ದಾರೆ. ಏಲಿಯನ್ ಕುರಿತಾದ ಕಥೆಯನ್ನು ಚಿತ್ರ ಹೊಂದಿದೆ. ಇನ್ನು 2017ರ ಮೇ 19ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ ಬರಲಿದೆ.

ಪಂಚ್ ಡೈಲಾಗಳೇ ಹೆಚ್ಚಾಗಿರುವ ಕಿರೀಟ ಚಿತ್ರದ ಟ್ರೈಲರ್

ಪಂಚ್ ಡೈಲಾಗಳೇ ಹೆಚ್ಚಾಗಿರುವ ಕಿರೀಟ ಚಿತ್ರದ ಟ್ರೈಲರ್

ಹೊಸಬರೇ ಸೇರಿ ಮಾಡಿರುವ ಕಿರೀಟ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವನಿರ್ದೇಶಕ ಕಿರಣ್ ಚಂದ್ರ ನಿರ್ದೇಶಿಸಿದ್ದರೆ, ಚಂದ್ರಶೇಖರ್ ನಿರ್ಮಿಸಿದ್ದಾರೆ. ಸಮರ್ಥ ಎಂಬ ಹೊಸ ಹುಡುಗ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಿಜಿಆರ್ ಪಿಕ್ಟರ್ಸ್ ಲಾಂಛನದಲ್ಲಿ ಚಿತ್ರ ತಯಾರಾಗಿದೆ.