ಮನರಂಜನೆ

ಸುದೀಪ್, ಉಪೇಂದ್ರ ಅಭಿನಯದ ಮುಕುಂದಾ ಮುರಾರಿ ಚಿತ್ರದ ಟ್ರೈಲರ್

ನಟ ಉಪೇಂದ್ರ ಹಾಗೂ ಸುದೀಪ್ ಅಭಿನಯದ ಮುಕುಂದಾ ಮುರಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಅಧ್ಯಕ್ಷ ಖ್ಯಾತಿಯ ನಂದಕಿಶೋರ್ ನಿರ್ದೇಶಿಸಿದ್ದಾರೆ. ಹಿಂದಿಯ ಓ ಮೈಗಾಡ್ ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟ ಸುದೀಪ್ ಹಾಗೂ ನಾಸ್ತಿಕನ ಪಾತ್ರದಲ್ಲಿ ನಟ ಉಪೇಂದ್ರ ಅಭಿನಯಿಸಿದ್ದಾರೆ.

ಸುದೀಪ್, ಉಪೇಂದ್ರ ಅಭಿನಯದ ಮುಕುಂದಾ ಮುರಾರಿ ಚಿತ್ರದ ಟ್ರೈಲರ್
ಕಾಲ್ ಕೆಜಿ ಪ್ರೀತಿ ಕನ್ನಡ ಚಿತ್ರ ಟ್ರೈಲರ್

ಕಾಲ್ ಕೆಜಿ ಪ್ರೀತಿ ಕನ್ನಡ ಚಿತ್ರ ಟ್ರೈಲರ್

ಕಾಲ್ ಕೆಜಿ ಪ್ರೀತಿ ಮತ್ತೊಂದು ಹೊಸಬರ ಚಿತ್ರವಾಗಿದ್ದು, ಚಿತ್ರವನ್ನು ಯೋಗರಾಜ್ ಭಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಸತ್ಯ ಶೌರ್ಯ ಸಾಗರ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಿನಿಮಾ ಮೈ ಡಾರ್ಲಿಂಗ್ ಖ್ಯಾತಿ ವಿಹಾನ್ ಮತ್ತು ಸಿಹಿಕಹಿಚಂದ್ರು ಅವರ ಪುತ್ರಿ ಹಿತಾ ಅವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಜಾನ್ ಜಾನಿ ಜನಾರ್ಧನ್ ಚಿತ್ರದ ಟ್ರೈಲರ್

ಜಾನ್ ಜಾನಿ ಜನಾರ್ಧನ್ ಚಿತ್ರದ ಟ್ರೈಲರ್

ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ರಾಜಾಹುಲಿ ಚಿತ್ರದ ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ಜಾನ್ ಜಾನಿ ಜನಾರ್ಧನ್ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮಲ್ಪಿಸ್ಟಾರ್ ಚಿತ್ರವಾದ ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿ ಅಜೇಯ ರಾವ್, ಯೋಗಿ ಮತ್ತು ಮದರಂಗಿ ಕೃಷ್ಣ ಅಭಿನಯಿಸಿದ್ದಾರೆ. ಚಿತ್ರ ಎಂ.ಆರ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು, ಎಲ್ ಪದ್ಮನಾಭ್, ಕೆ. ಗಿರೀಶ್ ಮತ್ತು ಶಶಿಕಿರಣ್ ನಿರ್ಮಿಸುತ್ತಿದ್ದಾರೆ.

ದೃಶ್ಯಗಳೇ ಇಲ್ಲದ ವಿನೂತನ ಹೃತಿಕ್‌ರ 'ಕಾಬಿಲ್' ಟೀಸರ್

ದೃಶ್ಯಗಳೇ ಇಲ್ಲದ ವಿನೂತನ ಹೃತಿಕ್‌ರ 'ಕಾಬಿಲ್' ಟೀಸರ್

ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ನಟನೆಯ 'ಕಾಬಿಲ್' ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದಾರೆ. ಟೀಸರ್ ನಲ್ಲಿ ದೃಶ್ಯಗಳೇ ಇಲ್ಲ. ಹೃತಿಕ್ ರೋಷನ್ ಅವರ ಹಿನ್ನೆಲೆ ಸಂಭಾಷಣೆ ಮಾತ್ರ ಕೇಳುತ್ತದೆ. ಕಾಬಿಲ್ ಚಿತ್ರವನ್ನು ಸಂಜಯ್ ಗುಪ್ತಾ ನಿರ್ದೇಶಿಸಿದ್ದಾರೆ.

ತರ್ಲೆ ಮಾತುಗಳೆ ಜೀವಾಳ, ತರ್ಲೆ ವಿಲೇಜ್ ಟೀಸರ್

ತರ್ಲೆ ಮಾತುಗಳೆ ಜೀವಾಳ, ತರ್ಲೆ ವಿಲೇಜ್ ಟೀಸರ್

ತಿಥಿ ಚಿತ್ರದ ಪ್ರಮುಖ ಪಾತ್ರದಾರಿಗಳಾದ ಸೆಂಚೂರಿ ಗೌಡ, ಗಡ್ಡಪ್ಪ, ತಮ್ಮಣ್ಣ, ಅಭಿ ಅಭಿನಯದ ಚಿತ್ರ ತರ್ಲೆ ವಿಲೇಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತಿಥಿ ಚಿತ್ರದಲ್ಲಿದ್ದಂತೆ ಈ ಚಿತ್ರದಲ್ಲೂ ಸೆಂಚೂರಿ ಗೌಡರ ತರ್ಲೆ ಮಾತುಗಳು ಕೇಳುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಚಿತ್ರವನ್ನು ಕೆಎಸ್ ರಘು ಎಂಬುವರು ನಿರ್ದೇಶಿಸಿದ್ದಾರೆ.

ದೀಪಿಕಾ ಇನ್ ಹಾಲಿವುಡ್; xXx: ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಟ್ರೇಲರ್

ದೀಪಿಕಾ ಇನ್ ಹಾಲಿವುಡ್; xXx: ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಟ್ರೇಲರ್

ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಸಿನೆಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ಚಿತ್ರ ಜನವರಿ 17 2017 ಕ್ಕೆ ಬಿಡುಗಡೆಯಾಗಲಿದ್ದು, ಟ್ರೇಲರ್ 2 ದಿನಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

'ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ' ಹಿಂದಿ ಸಿನೆಮಾ ಟ್ರೇಲರ್

'ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ' ಹಿಂದಿ ಸಿನೆಮಾ ಟ್ರೇಲರ್

ಕೊಂಕಣ ಸೇನ್ ಶರ್ಮ, ರತ್ನ ಪಾಠಕ್ ಷಾ, ಆಹಾನ ಕುಮ್ರ ಮತ್ತು ಪ್ಲಬಿತ ಬೋರ್ಠಾಕೂರ್ ನಟಿಸಿರುವ ಅಲಂಕೃತ ಶ್ರೀವಾಸ್ತವ ನಿರ್ದೇಶನದ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ' ಹಿಂದಿ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಸಮಾಜದಲ್ಲಿ ಬಂಧಿತರಾದ ಮಹಿಳೆಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಕಥಾ ಹಂದರ ಹೊಂದಿರುವ ಸಿನೆಮಾ ಇದು.