ಮನರಂಜನೆ

ಬದ್ಮಾಶ್ ಚಿತ್ರದ ಟ್ರೈಲರ್

ಡೈರಕ್ಟರ್ ಸ್ಪೆಷಲ್ ಚಿತ್ರ ಖ್ಯಾತಿಯ ಧನಂಜಯ್ ನಾಯಕನಾಗಿ ನಟಿಸಿರುವ ಬದ್ಮಾಶ್ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಸಂಚಿತಾ ಶೆಟ್ಟಿ ನಾಯಕಿಯಾಗಿ ಕಾಣಿಸಿರುವ ಚಿತ್ರದಲ್ಲಿ ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಜಹಂಗೀರ್ ನಟಿಸಿದ್ದಾರೆ. ಚಿತ್ರವನ್ನು ಆಕಾಶ್ ಶ್ರೀವಾತ್ಸವ್ ನಿರ್ದೇಶಿಸಿದ್ದಾರೆ.

ಬದ್ಮಾಶ್ ಚಿತ್ರದ ಟ್ರೈಲರ್
ರಾಜಹಂಸ ಚಿತ್ರದ ಟೀಸರ್

ರಾಜಹಂಸ ಚಿತ್ರದ ಟೀಸರ್

ಪುಟ್ಟಗೌರಿ ಮದುವೆ ಧಾರವಾಹಿಯ ಗೌರಿ ಪಾತ್ರದ ಮೂಲಕ ಪ್ರೇಕ್ಷಕ ವರ್ಗ ರೂಪಿಸಿಕೊಂಡಿರುವ ರಂಜನಿ ರಾಘವನ್ ಹಾಗೂ ಜೋಕಾಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೌರಿಶಿಖರ್ ಅಭಿನಯದ ರಾಜಹಂಸ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಡೇಕುಮಾರ್ ಹಂಪಿ ಅವರು ನಿರ್ದೇಶಿಸಿದ್ದು, ಚಿತ್ರದಲ್ಲಿ ಹಿರಿಯ ನಟ ಶ್ರೀಧರ್, ಬಿಸಿ ಪಾಟೀಲ್, ಯಮುನ ಅಭಿನಯಿಸಿದ್ದಾರೆ.

ಜಾನ್ ಜಾನಿ ಜನಾರ್ಧನ್ ಚಿತ್ರದ ಆಡಿಯೋ ಟೀಸರ್

ಜಾನ್ ಜಾನಿ ಜನಾರ್ಧನ್ ಚಿತ್ರದ ಆಡಿಯೋ ಟೀಸರ್

ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ರಾಜಾಹುಲಿ ಚಿತ್ರದ ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ಜಾನ್ ಜಾನಿ ಜನಾರ್ಧನ್ ಚಿತ್ರದ ಆಡಿಯೋ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮಲ್ಪಿಸ್ಟಾರ್ ಚಿತ್ರವಾದ ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿ ಅಜೇಯ ರಾವ್, ಯೋಗಿ ಮತ್ತು ಮದರಂಗಿ ಕೃಷ್ಣ ಅಭಿನಯಿಸಿದ್ದಾರೆ. ಚಿತ್ರ ಎಂ.ಆರ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು, ಎಲ್ ಪದ್ಮನಾಭ್, ಕೆ. ಗಿರೀಶ್ ಮತ್ತು ಶಶಿಕಿರಣ್ ನಿರ್ಮಿಸುತ್ತಿದ್ದಾರೆ.

ಪುಷ್ಪಕ ವಿಮಾನದ 'ಜಿಲ್ಕಾ ಜಿಲ್ಕಾ' ಹಾಡಿನ ಝಲಕ್

ಪುಷ್ಪಕ ವಿಮಾನದ 'ಜಿಲ್ಕಾ ಜಿಲ್ಕಾ' ಹಾಡಿನ ಝಲಕ್

ರಮೇಶ್ ಅರವಿಂದ್ ಅವರ 100 ನೇ ಸಿನೆಮಾ ಪುಷ್ಪಕ ವಿಮಾನದ, ವಿಶೇಷ ಹಾಡು ಎಂದು ಹೇಳಲಾಗುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲಾ ಕಾಣಿಸಿಕೊಂಡಿರುವ 'ಜಿಲ್ಕಾ ಜಿಲ್ಕಾ' ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಸಿನೆಮಾದ ಆಡಿಯೋ ಅಕ್ಟೋಬರ್ 1 ಕ್ಕೆ ಬಿಡುಗಡೆಯಾಗಲಿದೆ. ಈ ಪ್ರಸಕ್ತ ಹಾಡಿನ ಸಾಹಿತ್ಯದ ಬಗ್ಗೆ ಸಾಮಾಜಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿದೆ.