ಬ್ಯೂಟಿ ಅಂಡ್ ದಿ ಬೀಸ್ಟ್ ಚಿತ್ರದ ಟ್ರೈಲರ್ಡಿಸ್ನಿ ಕಂಪನಿ ನಿರ್ಮಿಸುತ್ತಿರುವ ಬ್ಯೂಟಿ ಅಂಡ್ ದಿ ಬೀಸ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹ್ಯಾರಿ ಪಾಟರ್ ಖ್ಯಾತಿಯ ಎಮಾ ಬೆಲ್ಲೆ ಆಗಿ ಕಾಣಿಸಿಕೊಂಡಿದ್ದಾರೆ. ಡೌಟ್ ಟನ್ ಅಬೆ ಚಿತ್ರದ ನಟ ಡಾನ್ ಸ್ಟಿವೆನ್ಸ್ ಪ್ರಿನ್ಸ್ ಆಡಂ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಜ್ವಲ್ ದೇವರಾಜ್ ನಟನೆಯ ಮಾದ ಮತ್ತು ಮಾನಸಿ ಚಿತ್ರದ ಟ್ರೈಲರ್ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಶೃತಿ ಹರಿಹರನ್ ನಟನೆಯ ಮಾದ ಮತ್ತ ಮಾನಸಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸತೀಶ್ ಪ್ರಧಾನ್ ನಿರ್ದೇಶಿಸುತ್ತಿದ್ದು, ಮುಂಗಾರು ಮಳೆ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ನೀಡಿದ್ದಾರೆ.
'ನಮ್ಮೂರ್ ಹೈಕ್ಳು' ಚಿತ್ರದ ಟ್ರೈಲರ್ಪ್ರಸನ್ನ ಶೆಟ್ಟಿ ನಿರ್ದೇಶದ ನಮ್ಮೂರ್ ಹೈಕ್ಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಘು ರಾಜ್, ಕುರಿ ಸುನೀಲ್, ಮಜಾ ಟಾಕೀಸ್ ಪವನ್ ಕುಮಾರ್, ವಿನಯ್ ರಾಮ್ ಅಭಿನಯಿಸುತ್ತಿದ್ದು ದೀಪ್ತಿ ಮತ್ತು ತೇಜು ಎಂಬುವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಗೇನಹಳ್ಳಿ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
T2 ಟ್ರೈನ್ ಸ್ಪಾಟಿಂಗ್ ಸಿನೆಮಾ ಟ್ರೇಲರ್ಸ್ಲಮ್ ಡಾಗ್ ಮಿಲಿಯನೇರ್ ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶ ಡ್ಯಾನ್ನಿ ಬಾಯ್ಲ್ ನಿರ್ದೇಶನದ T2 ಟ್ರೈನ್ ಸ್ಪಾಟಿಂಗ್ ಚಿತ್ರದ ಟ್ರೇಲರ್ ಸಿನೆ ರಸಿಕರ ಗಮನ ಸೆಳೆದಿದೆ. ಈ ಸಿನೆಮಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.
ವಂಡರ್ ವುಮನ್ ಸಿನೆಮಾ ಟ್ರೇಲರ್ಗಾಲ್ ಗ್ಯಾಡತ್ ನಟಿಸಿರುವ ವಂಡರ್ ವುಮನ್ ಸಿನೆಮಾದ ಟ್ರೇಲರ್ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ವಾರ್ನರ್ ಬ್ರದರ್ಸ್ ನಿರ್ಮಿಸಿರುವ ಈ ಸಿನೆಮಾ ಜೂನ್ 2 2017 ಕ್ಕೆ ಬಿಡುಗಡೆಯಾಗಲಿದೆ.
ನಾನು ಮತ್ತು ವರಲಕ್ಷ್ಮಿ ಚಿತ್ರದ ಅಧಿಕೃತ ಟ್ರೈಲರ್ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ಮೋಟರ್ ರೇಸಿಂಗ್ ಕಥಾವಸ್ತು ಹೊಂದಿರುವ ನಾನು ಮತ್ತು ವರಲಕ್ಷ್ಮೀ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದು, ಮಲೆಯಾಳಂ ಬೆಡಗಿ ಮಾಳವಿಕಾ ಮೋಹನನ್ ನಾಯಕಿಯಾಗಿದ್ದಾರೆ.
ಬೇಫಿಕರ್ ಚಿತ್ರದ ಉಡೇ ದಿಲ್ ಬೇಫಿಕರ್ ಸಾಂಗ್ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬೇಫಿಕರ್ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ರಣವೀರ್ ಮತ್ತು ವಾಣಿ ಕಪೂರ್ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶಾಲ್-ಶೇಖರ್ ಸಂಗೀತ ನೀಡಿದ್ದು ಹಾಡುಗಳು ಸಖತ್ ಫೇಮಸ್ ಆಗಿವೆ. ಡಿಸೆಂಬರ್ 9 ರಂದು ದೇಶಾದ್ಯಂತ ಚಿತ್ರ ತೆರೆಕಾಣಲಿದೆ.
ಶಿವಣ್ಣ ಅಭಿನಯದ ಶ್ರೀಕಂಠ ಚಿತ್ರದ ಟ್ರೈಲರ್ಡಾ.ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರನವನ್ನು ಶ್ರಾವಣಿ, ಸುಬ್ರಮಣ್ಯ ಖ್ಯಾತಿಯ ಮಂಜು ಸ್ವರಾಜ್ ಅವರು ನಿರ್ದೇಶಿಸಿದ್ದಾರೆ.
ಅನಿಶ್ ಅಭಿನಯದ ಮಾಂಜಾ ಚಿತ್ರದ ಫಸ್ಟ್ ಲುಕ್ ಟೀಸರ್ಪೊಲೀಸ್ ಕ್ವಾಟರ್ಸ್ ಚಿತ್ರ ಖ್ಯಾತಿಯ ಅಕಿರ ಅನಿಶ್ ಅಭಿನಯದ ಮಾಂಜಾ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಅನಿಶ್ ಮಾಸ್ ಲುಕ್ ನಲ್ಲಿ ಕಾಣಿಸಿದ್ದಾರೆ. ಚಿತ್ರವನ್ನು ಡಾ. ಸೂರಿ ನಿರ್ದೇಶಿಸಿದ್ದು, ಚೇತನ್ ಕುಮಾರ್, ಎಸ್ಎಸ್ ರೆಡ್ಡಿ, ಶ್ರೀಕಾಂತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಿಶ್ ಗೆ ಜೋಡಿಯಾಗಿ ದೀಪಾ ಸನ್ನಿಧಿ ನಟಿಸಿದ್ದಾರೆ.
ಜಲ್ಸಾ ಚಿತ್ರದ ಟ್ರೈಲರ್ನಿರಂಜನ್ ಒಡೆಯರ್ ಮತ್ತು ಅಕಾಂಕ್ಷ ಅಭಿನಯದ ಜಲ್ಸಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಂತ ಕಣ್ಣಲ್ಲಿ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಸರೋಜ ದೇವಿ, ಸಿ ಬಸವರಾಜು ಅವರು ನಿರ್ಮಿಸಿದ್ದಾರೆ.
ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ'ಯ ಟ್ರೇಲರ್ರಿಷಬ್ ಶೆಟ್ಟಿ ಬರೆದು ನಿರ್ದೇಶಿರುವ 'ಕಿರಿಕ್ ಪಾರ್ಟಿ'ಯ ಟ್ರೇಲರ್ ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ, ಅಚ್ಯುತ್ ಕುಮಾರ್ ಮುಂತಾದವರು ತಾರಾಗಣದಲ್ಲಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ರಾಕ್ ಆನ್-2 ಹಿಂದಿ ಸಿನೆಮಾ ಟ್ರೇಲರ್ಫರ್ಹಾನ್ ಅಕ್ತರ್, ಶ್ರದ್ಧಾ ಕಪೂರ್, ಪ್ರಾಚಿ ದೇಸಾಯಿ ಮತ್ತು ಅರ್ಜುನ್ ರಾಂಪಾಲ್ ಅಭಿನಯದ ರಾಕ್ ಆನ್-2 ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಶುಜಾತ್ ಸೌದಾಗರ್ ನಿರ್ದೇಶನದ ಈ ಸಂಗೀತ ಪ್ರಧಾನ ಸಿನೆಮಾ ನವೆಂಬರ್ 11 ಕ್ಕೆ ಬಿಡುಗಡೆಯಾಗಲಿದೆ.
ಕಹಾನಿ-2 ಹಿಂದಿ ಸಿನೆಮಾ ಟ್ರೇಲರ್ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಂಪಾಲ್ ಅಭಿನಯದ ಕಹಾನಿ-2 ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಸುಜೋಯ್ ಘೋಷ್ ನಿರ್ದೇಶನದ ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನೆಮಾ ಡಿಸೆಂಬರ್ 2 ಕ್ಕೆ ಬಿಡುಗಡೆಯಾಗಲಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನ ಯಶಸ್ವಿ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ರಾವ್ ನಿರ್ದೇಶಿಸಿದ್ದು, ಚಿತ್ರ ಅಕ್ಟೋಬರ್ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಹೃತಿಕ್ ಅಭಿನಯದ ಕಾಬಿಲ್ ಚಿತ್ರದ ಟ್ರೈಲರ್ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ನಟನೆಯ 'ಕಾಬಿಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಶನ್ ಹಾಗೂ ಯಾಮಿ ಗೌತಮ್ ಅಂಧರಾಗಿ ಕಾಣಿಸಿಕೊಂಡಿದ್ದಾರೆ. ಕಾಬಿಲ್ ಚಿತ್ರವನ್ನು ಸಂಜಯ್ ಗುಪ್ತಾ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ