ಮನರಂಜನೆ

ಮೀರ್ಜ್ಯಾ ಹಿಂದಿ ಸಿನೆಮಾ ಟ್ರೇಲರ್

ಜನಪದ ಕಥೆಯೊಂದರಿಂದ ಸ್ಫೂರ್ತಿ ಪಡೆದು ಹಿಂದಿಯ ಖ್ಯಾತ ಲೇಖಕ ಗುಲ್ಜಾರ್ ಚಿತ್ರ ಕಥೆ ರಚಿಸಿ, ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿರುವ 'ಮೀರ್ಜ್ಯಾ' ಚಿತ್ರದ ಟ್ರೇಲರ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಹರ್ಷವರ್ಧನ್ ಕಪೂರ್, ಸಯಾಮಿ ಖೇರ್ ಮತ್ತು ಅನುಜ್ ಚೌಧರಿ ನಟಿಸಿರುವ ಈ ಚಿತ್ರ ಅಕ್ಟೋಬರ್ ೭ಕ್ಕೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಮೀರ್ಜ್ಯಾ ಹಿಂದಿ ಸಿನೆಮಾ ಟ್ರೇಲರ್
'ರಾಮನ್ ರಾಘವ್ 2.೦' ಬೇಹುದಾ ವಿಡಿಯೋ ಹಾಡು

'ರಾಮನ್ ರಾಘವ್ 2.೦' ಬೇಹುದಾ ವಿಡಿಯೋ ಹಾಡು

ಮುಂಬೈ ನ ಸರಣಿ ಕೊಲೆಗಾರ ರಾಮನ್ ರಾಘವ್ ಕುರಿತಾದ ಅನುರಾಗ್ ಕಶ್ಯಪ್ ನಿರ್ದೇಶನದ 'ರಾಮನ್ ರಾಘವ್ ೨.೦' ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನವಾಜುದ್ದೀನ್ ಸಿದ್ದಿಕಿ ಅವರ ನಟನೆಗೆ ಕರತಾಡನವಾಗಿತ್ತು. ರಾಮ್ ಸಂಪತ್ ಸಂಗೀತ ನಿರ್ದೇಶನದಲ್ಲಿ, ನಯನತಾರ ಭಟ್ಕಳ್ ಹಾಡಿರುವ ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಈ ಸಿನೆಮಾ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.

ಸಂತೆಯಲ್ಲಿ ನಿಂತ ಕಬೀರ ಚಿತ್ರದ ಟ್ರೇಲರ್

ಸಂತೆಯಲ್ಲಿ ನಿಂತ ಕಬೀರ ಚಿತ್ರದ ಟ್ರೇಲರ್

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಂತೆಯಲ್ಲಿ ನಿಂತ ಕಬೀರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಇಂದ್ರಬಾಬು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನಂತನಾಗ್ , ಸನುಶ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದು, ಚಿತ್ರಕ್ಕೆ ಇಸ್ಮಾಯಿಲ್ ದರ್ಬಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.