ಮನರಂಜನೆ

ರಜನಿ ಕಬಾಲಿ ಚಿತ್ರದ ಮೇಕಿಂಗ್ ವಿಡಿಯೋ

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಕಬಾಲಿ ಚಿತ್ರ ಇದೇ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳ ಎದೆ ಬಡಿತ ಜಾಸ್ತಿ ಮಾಡಿದೆ. ಇನ್ನು ಈ ಚಿತ್ರದ ಮೇಕಿಂಗ್ ಕುರಿತ ವಿಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಸಖತ್ ರೆಸ್ಪಾನ್ ಸಿಕ್ಕಿದೆ.

ರಜನಿ ಕಬಾಲಿ ಚಿತ್ರದ ಮೇಕಿಂಗ್ ವಿಡಿಯೋ
ದೀಪಿಕಾ-ವಿನ್ ಡಿಸೇಲ್ 'ದಿ ರಿಟರ್ನ್ ಆಫ್ ಝೆಂಡರ್ ಕೇಜ್' ಚಿತ್ರದ ಟ್ರೈಲರ್

ದೀಪಿಕಾ-ವಿನ್ ಡಿಸೇಲ್ 'ದಿ ರಿಟರ್ನ್ ಆಫ್ ಝೆಂಡರ್ ಕೇಜ್' ಚಿತ್ರದ ಟ್ರೈಲರ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿರುವ ಹಾಲಿವುಡ್ ನ ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಝೆಂಡರ್ ಕೇಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಾಹಸ ಪ್ರಧಾನ ಚಿತ್ರದಲ್ಲಿ ವಿನ್ ಡೀಸೆಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಸೆರೆನಾ ಪಾತ್ರದಲ್ಲಿ ನಟಿಸುತ್ತಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಡಬಲ್ ಮಿನಿಂಗ್ ಜತೆ ಕ್ಯೂಟ್ ಪ್ರೇಮಕತೆ ಈ 'ಮಾತುಕತೆ' ಟ್ರೈಲರ್

ಡಬಲ್ ಮಿನಿಂಗ್ ಜತೆ ಕ್ಯೂಟ್ ಪ್ರೇಮಕತೆ ಈ 'ಮಾತುಕತೆ' ಟ್ರೈಲರ್

ಗಾಲಿ ಚಿತ್ರದ ಮೂಲಕ ಡಬಲ್ ಮಿನಿಂಗ್ ಡೈಲಾಗ್ ಗಳಿಂದಲೆ ಖ್ಯಾತರಾದ ನಿರ್ದೇಶಕ ಇದೀಗ ಮತ್ತದೆ ಡಬಲ್ ಮಿನಿಂಗ್ ಡೈಲಾಗ್ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಮಾತುಕತೆ ಎಂದೇ ಟೈಟಲ್ ಇಡಲಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ತುಂಬಾ ಡಬಲ್ ಮಿನಿಂಗ್ ನಿಂದ ಕೂಡಿದ್ದು ಜತೆಗೆ ಕ್ಯೂಟ್ ಪ್ರೇಮಕತೆ ಇದೆಯಂತೆ. ಕೃಷ್ಣಕುಮಾರ್, ಗೌತಮಿ ಗೌಡ ಸತೀಶ್ ಬಾಬು ಅಭಿನಯಿಸಿದ್ದಾರೆ. ಚಿತ್ರ ನಾಳೆ ತೆರೆ ಕಾಣಲಿದೆ.

ಅಬ್ಬಾಸ್ ಕ್ಯೋರೋಸ್ತಾಮಿ ಅವರ ಮೊದಲ (ಕಿರು)ಚಿತ್ರ 'ದ ಬ್ರೆಡ್ ಅಂಡ್ ಅಲ್ಲೆ'

ಅಬ್ಬಾಸ್ ಕ್ಯೋರೋಸ್ತಾಮಿ ಅವರ ಮೊದಲ (ಕಿರು)ಚಿತ್ರ 'ದ ಬ್ರೆಡ್ ಅಂಡ್ ಅಲ್ಲೆ'

ವಿಶ್ವ ವಿಖ್ಯಾತ ಇರಾನ್ ಸಿನೆಮಾ ನಿರ್ದೇಶಕ ಅಬ್ಬಾಸ್ ಕ್ಯೋರೋಸ್ತಾಮಿ ಇಂದು ನಿಧನರಾಗಿದ್ದಾರೆ. ಅವರು 70 ರ ದಶಕದಲ್ಲಿ ನಿರ್ದೇಶಿಸಿದ ಈ ಕಿರು ಚಿತ್ರ ನಾಯಿ ಕಂಡರೆ ಭಯ ಬೀಳುವ 'ಫೋಬಿಯಾ' ಕುರಿತಾದದ್ದು. ಇಂದಿಗೂ ಬಹಳ ಸಂಗತವಾದ ಈ ವಿಷಯದ ಕುರಿತ ಸಿನೆಮಾ ಬಹು ಚರ್ಚಿತ ಮತ್ತು ಪ್ರಖ್ಯಾತ ಕೂಡ. ನೀವು ನೋಡಿ.

ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದ ಟ್ರೇಲರ್

ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದ ಟ್ರೇಲರ್

ಕಿಚ್ಚ ಸುದೀಪ್ ಹಾಗೂ ನಿತ್ಯಾಮೆನನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-2 ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಎಂಬಿ ಬಾಬು ಅವರು ನಿರ್ಮಾಣ ಮಾಡಿದ್ದು, ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.