ಸುದ್ದಿ
ಮಗಳ ಮೊಬೈಲ್ ವಶಕ್ಕೆ ಪಡೆದ ಶಿಕ್ಷಕಿಗೆ ಥಳಿಸಿದ ತಾಯಿ
ಶಾಲೆಗೆ ಮೊಬೈಲ್ ತರಬಾರದು ಎಂಬ ನಿಯಮವಿದ್ದರೂ ಅದನ್ನು ಮೀರಿ ಮೊಬೈಲ್ ತಂದಿದ್ದ ವಿದ್ಯಾರ್ಥಿನಿಯ ಮೊಬೈಲನ್ನು ಶಾಲೆಯ ಶಿಕ್ಷಕರು ವಶಪಡಿಸಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಾಯಿ ಮೊಬೈಲ್ ವಶ ಪಡಿಸಿಕೊಳ್ಳಲು ಆದೇಶ ನೀಡಿದ ಶಾಲಾ ಮುಖ್ಯಸ್ಥೆಗೆ ಹಿಗ್ಗಾ-ಮುಗ್ಗಾ ತಳಿಸಿದ ಘಟನೆ ಜಲಂದರ್’ನಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಕೃಪೆ: ಎಚ್‌ಟಿ ಪಂಜಾಬ್
