ಸುದ್ದಿ
ಇದು ಸಿನಿಮಾ ಸ್ಟಂಟ್ ಅಲ್ಲ, ರಿಯಲ್ ಸ್ಟಂಟ್!
ಇದು ಸಿನಿಮಾ ಸ್ಟಂಟ್ ಅಲ್ಲ, ರಿಯಲ್ ಸ್ಟಂಟ್, ವೋಲ್ವೋ ಬಸ್ ಚಾಲಕನ ಹಾಗೂ ಸ್ವಿಫ್ಟ್ ಕಾರಿನ ಚಾಲಕನ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಕೊಂಡ ಸ್ವಿಫ್ಟ್ ಕಾರಿನ ಚಾಲಕನು ವೋಲ್ವೋ ಬಸ್ಸಿನ ಚಾಲಕನಿಗೆ ಬ್ಯಾಟಿನಿಂದ ಹೊಡೆದು ಬಸ್ಸಿನ ವಿಂಡ್ ಶೀಲ್ಡ್ ಗಾಜನ್ನು ಪುಡಿ ಮಾಡಿ ಓಡಿ ಹೋಗಲು ಮುಂದಾಗಿದ್ದಾನೆ. ಒಡನೆಯೇ ವೋಲ್ವೋ ಬಸ್ಸಿನ ಚಾಲಕನು ಸ್ವಿಫ್ಟ್ ಕಾರಿನ ಚಾಲಕನನ್ನು ಹಿಡಿಯಲು ಮುಂದಾಗಿದ್ದಾನೆ. ಆದರೆ ಅದು ಸಾಧ್ಯವಾಗದೇ ಆತ ಕಾರಿನ ಬಾನೆಟ್ ಮೇಲೆ ಬಿದ್ದಿದ್ದ. ಬಸ್ಸಿನ ಚಾಲಕನು ಕಾರಿನ ವೈಪರ್‌ಗಳನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಜೀವ ಹಾನಿ ಸಂಭವಿಸಿಲ್ಲ.
