ಸುದ್ದಿ
ಅಚ್ಚರಿ: ಕೇವಲ 7 ನಿಮಿಷದಲ್ಲಿ ಬುಲೆಟ್ ರೈಲು ಸ್ವಚ್ಛ..!
ವಿಶ್ವದಲ್ಲೇ ಅತ್ಯಂತ ಬಲಿಷ್ಠ, ಸುಭದ್ರ ಮತ್ತು ವೇಗದ ರೈಲಿನ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಜಪಾನ್ ಅಗ್ರಗಣ್ಯ. ಜಪಾನ್ ರಾಜಧಾನಿ ಟೋಕಿಯಾದಲ್ಲಿ ಪ್ರತಿನಿತ್ಯ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ಈ ಬುಲೆಟ್ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಇಂತಹ ಜನನಿಭಿಡ ರೈಲುಗಳನ್ನು ಸ್ವಚ್ಛಗೊಳಿಸಲು ಎಷ್ಟು ಸಮಯ ಬೇಕುಗೊತ್ತೆ..? ಕೇವಲ 7 ನಿಮಿಷ.. ಅಚ್ಚರಿಯಾದರೂ ಇದು ಸತ್ಯ. ಅಲ್ಲಿನ ಸಿಬ್ಬಂದಿಗಳು ಒಂದು ಬುಲೆಟ್ ರೈಲನ್ನು ಕೇವಲ 7 ನಿಮಿಷದಲ್ಲಿ ಸ್ವಚ್ಛಗೊಳಿಸುತ್ತಾರೆ. ಅವರ ಈ ಬದ್ಧತೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.(ಕೃಪೆ: ಯೂಟ್ಯೂಬ್)
