ಸುದ್ದಿ
ಹಸಿದ ಮೊಸಳೆಗೆ ಹಂದಿ ಆಹಾರವಾಗುವಂತೆ ಮಾಡಿದ ಪ್ರವಾಸಿಗರು
ಮನುಷ್ಯ ಸ್ವಭಾವತ ಕ್ರೂರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಲ್ಲ ಎನ್ನುವುದಕ್ಕೆ ಅಮೆರಿಕಾದಲ್ಲಿ ಈ ಪ್ರವಾಸಿಗರು ಕಾಡುಪ್ರಾಣಿಯೊಂದಿಗೆ ನಡೆದುಕೊಂಡ ರೀತಿಯೇ ಉತ್ತಮ ಉದಾಹರಣೆ. ಲೂಸಿಯಾನಾದ ನ್ಯೂ ಆರ್ಲಿಯನ್ಸ್ ನಲ್ಲಿ ಮೊಸಳೆಗಳು ಇರುವ ಹೊಳೆಯಲ್ಲಿ ಬೋಟ್ ಒಂದರಲ್ಲಿ ಸಾಗುತ್ತಿದ್ದ ಪ್ರವಾಸಿಗರು ಹೊಳೆಯ ದಡದಲ್ಲಿ ಗುಂಪಾಗಿ ನಿಂತಿದ್ದ ಕಾಡು ಹಂದಿಗಳಿಗೆ ಬ್ರೆಡ್ಡಿನ ತುಂಡುಗಳನ್ನು ಎಸೆದು ಅವುಗಳಲ್ಲಿನ ಒಂದು ಹಂದಿ ಹಸಿದ ಮೊಸಳೆಗೆ ಆಹಾರವಾಗುವಂತೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದೆ.
