ಸುದ್ದಿ
ವಿಚ್ಛೇದಿತ ಪತ್ನಿಗೆ "ಅರ್ಧ" ಪಾಲು ನೀಡಿದ ಪತಿರಾಯ!
ಪತ್ನಿಯನ್ನು `ಅರ್ಧಾಂಗಿ' ಎನ್ನುತ್ತಾರೆ. ಜರ್ಮನಿಯ ಅಸಾಮಿಯೊಬ್ಬ ಈ ಪದವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾನೆ. ವಿಚ್ಛೇದನ ಪಡೆಯುವಾಗ ಪತ್ನಿಗೆ ತನ್ನ ಆಸ್ತಿಯ ಅರ್ಧಭಾಗವನ್ನು ಕೊಡುವುದಕ್ಕೆ ಡೆರ್ ಜೂಲಿ ಯಾವುದೇ ತಕರಾರೆತ್ತದೆ ಒಪ್ಪಿಕೊಂಡಿದ್ದ. ತನ್ನಲ್ಲಿರುವ ಎಲ್ಲ ವಸ್ತುಗಳನ್ನೂ ಸರಿಯಾಗಿ ಅರ್ಧಕ್ಕೆ ಕತ್ತರಿಸಿ, ಅದನ್ನು ಪತ್ನಿಗೆ ಕೊಟ್ಟಿದ್ದಾನೆ..!
