ಸುದ್ದಿ
ಹಾವಿನೊಡನೆ ಹೋರಾಡಿ ಮರಿಗಳ ರಕ್ಷಿಸಿದ ತಾಯಿ ಮೊಲ..!
ಮರಿಗಳ ರಕ್ಷಣೆಗೆ ತಾಯಿ ಧಾವಿಸುವುದು ಸಾಮಾನ್ಯವೇ ಆದರೂ, ಸಾಧುಪ್ರಾಣಿ ಮೊಲವೊಂದು ತನ್ನ ಮರಿಗಳ ರಕ್ಷಣೆಗೆ ಜೀವದ ಹಂಗು ತೊರೆದು ವಿಷಕಾರಿ ಹಾವಿನೊಂದಿಗೆ ಹೋರಾಡಿರುವ ನೈಜ ದೃಶ್ಯಾವಳಿಗಳು ಇದೀಗ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು ವಿಡಿಯೋವನ್ನು ಸುಮಾರು 43 ಲಕ್ಷ ಜನರು ವೀಕ್ಷಿಸಿದ್ದು, ರಮಾಕಾಂತ್ ಪಿ ಎಂಬುವವರು ಈ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ.
