ಸುದ್ದಿ
ಚೆಂದದ ನುಡಿ ಕನ್ನಡ-ಗಂಧದಗುಡಿ ಕರ್ನಾಟಕ
ಕರ್ನಾಟಕ ಅಮೂಲ್ಯ ಸಂಪನ್ಮೂಲಗಳ ನೆಲೆವೀಡಾಗಿದ್ದು, ಕನ್ನಡ ನಾಡಿನ ಅರಣ್ಯ ಸಂಪತ್ತು ಮತ್ತು ಸಂಪದ್ಭರಿತ ಭಾಷೆಯ ಮಹತ್ವ ಸಾರುವ ವಿಡಿಯೋವನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮತ್ತು ವನ್ಯಜೀವಿ ಛಾಯಾಗ್ರಾಹಕ ಮತ್ತು ಚಿತ್ರನಿರ್ಮಾಪಕ ಅಮೋಘ ವರ್ಷ ಅವರು ನಿರ್ಮಾಣ ಮಾಡಿದ್ದಾರೆ. ಈ ವಿಡಿಯೋಗೆ ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರು ಸಾಹಿತಿ ನೀಡಿದ್ದು, ಖ್ಯಾತ ಹಿನ್ನಲೆಗಾಯಕರಾದ ಎಂಡಿ ಪಲ್ಲವಿ ಮತ್ತು ವಿಜಯಪ್ರಕಾಶ್ ಅವರು ಧ್ವನಿ ನೀಡಿದ್ದಾರೆ.
