ಸುದ್ದಿ
ಮುಂಬೈ-ಥಾಣೆ ಲೋಕಲ್ ಟ್ರೈನ್‍ನಿಂದ ಬಿದ್ದು ಯುವಕ ಸಾವು
ಮುಂಬೈ-ಥಾಣೆ ಲೋಕಲ್ ಟ್ರೈನ್ ಡೋರ್ ಹಿಡಿದು ಜೋತು ಬಿದ್ದು ಪ್ರಯಾಣಿಸುತ್ತಿದ್ದ ಯುವಕ ಸಾವನ್ನಪ್ಪಿದ್ದಾನೆ. ಅದರ ಲೈವ್ ವಿಡಿಯೋ ಸೆರೆಯಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂಬೈ ಯುವಕ ಇತರರಂತೆ ಟ್ರೈನ್ ಡೋರ್ ಹಿಡಿದು ಜೋತು ಬಿದ್ದಿದ್ದಾನೆ. ಆದರೆ ಮಾರ್ಗ ಮಧ್ಯದಲ್ಲಿ ನೂಕುನುಗ್ಗಲು ಉಂಟಾಗಿರುವ ಕಾರಣ ಆತ ಏಕಾಏಕಿಯಾಗಿ ಕಳೆಗೆ ಬಿದ್ದು ಸಾವನ್ನಪ್ಪಿದ್ದಾನೆ.
