ಸುದ್ದಿ
ವೈರಲ್ ಆಗಿದೆ ಟಿಡಿಪಿ ಎಂಪಿ ಮಲ್ಲಾ ರೆಡ್ಡಿ ಗಂಗ್ನಮ್ ಸ್ಟೈಲ್ ಡ್ಯಾನ್ಸ್
ಹೈದರಾಬಾದ್ ಸಿಎಂಆರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜು ಸಮಾರಂಭದಲ್ಲಿ ಮಲ್ಕಜ್ಗಿರಿ ತೆಲುಗು ದೇಶಂ ಪಕ್ಷದ ಎಂಪಿ 56 ವರ್ಷದ ಸಿ ಮಲ್ಲಾ ರೆಡ್ಡಿ ಅವರು ಗಂಗ್ನಮ್ ಸ್ಟೈಲ್ ಡ್ಯಾನ್ಸ್ ಮಾಡಿ ನೆರೆದಿದ್ದ ವಿದ್ಯಾರ್ಥಿಗಳಿಗೆ ರಸದೌತನ ನೀಡಿದರು. ಈ ನೃತ್ಯವನ್ನು ಹಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.
