ಓ ನೀರೆ, ಹುಶಾರು ಸೀರೆ

ರೇಷ್ಮೆ ಸೀರೆ ಹಾಗೂ ಇನ್ನಿತರ ಒಳ್ಳೆಯ ಸೀರೆಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿರುತ್ತೇವೆ. ಹಾಗಿರುವಾಗ ಅಂತಹ ಸೀರೆಗಳನ್ನು ...
Updated on: 

ರೇಷ್ಮೆ ಸೀರೆ ಹಾಗೂ ಇನ್ನಿತರ ಒಳ್ಳೆಯ ಸೀರೆಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿರುತ್ತೇವೆ. ಹಾಗಿರುವಾಗ ಅಂತಹ ಸೀರೆಗಳನ್ನು ಜೋಪಾನ ಮಾಡುವುದೂ ಅಷ್ಟೇ ಮುಖ್ಯ. ತುಂಬಾ ಬೆಲೆಬಾಳುವ ರೇಷ್ಮೆ ಸೀರೆಯನ್ನಂತೂ ಬದುಕಿನಲ್ಲಿ ಕೆಲವನ್ನಷ್ಟೇ ಖರೀದಿಸಿರುತ್ತೇವೆ. ಅಂತಹ ಬೆಲೆಬಾಳುವ ಸೀರೆಗಳನ್ನು ಅತ್ಯಂತ ಸರಳವಾದ ಕೆಲವು ಟಿಪ್ಸ್ ಬಳಸಿ ಹಾಳಾಗದಂತೆ ಬಹಳ ವರ್ಷಗಳ ಕಾಲ ಜೋಪಾನವಾಗಿ ಇಟ್ಟುಕೊಳ್ಳಬಹುದು. ಅಂಥವು ಇಲ್ಲಿವೆ...
- ಮಳೆಗಾಲ ಪ್ರಾರಂಭ ಆಗುವುದಕ್ಕೆ ಮೊದಲು ರೇಶ್ಮೆ ಹಾಗೂ ಇತರೆ ಸೀರೆಗಳನ್ನು ಬಿಸಿಲಿಗೆ ಹಾಕಿ ಬೆಚ್ಚಗೆ ಮಾಡಿ ಮಡಚಿಡಿ. ಸಮಾರಂಭಗಳಿಗೆ ಉಟ್ಟ ರೇಶ್ಮೆ, ರಿಚ್ ಕಾಟನ್ ಸಾರಿಗಳನ್ನು ಸಾಧಾರಣ ಒದ್ದೆಬಟ್ಟೆಯಲ್ಲಿ ಅಡಿ ಭಾಗ ಮತ್ತು ಮೇಲ್ಭಾಗವನ್ನು ಒರೆಸಿ ಒಣಗಿಸಿ ಇಟ್ಟುಬಿಡಿ. 2 ಗಂಟೆ ಉಟ್ಟ ರೇಶ್ಮೆ ಸಾರಿಯಾದರೆ ನೆಲಭಾಗಕ್ಕೆ ಮುಟ್ಟಿದ ಸೀರೆಯ ಭಾಗವನ್ನು ಮಾತ್ರ ಒರೆಸಿದರೆ ಸಾಕು.
- ಹತ್ತಿರದ ಸಂಬಂಧದ ಮದುವೆ ಕಾರ್ಯಕ್ರಮಗಳಿಗೆ ಉಟ್ಟ ಸೀರೆಯನ್ನು ಸಂಪೂರ್ಣವಾಗಿ ಒರೆಸಿ, ತೊಳೆಯ ಬೇಕಾದಲ್ಲಿ ಶಾಂಪು ಹಾಕಿ ಕೈಯಿಂದ ತೊಳೆದು ಹಿಂಡದೆ ಒಣ ಹಾಕಿ.
- ಬೆವರಿದೆ ಎಂದೆನಿಸಿದರೆ ಬ್ಲೌಸಿನ ಕೈಯ ಅಡಿಭಾಗವನ್ನು ತೊಳೆದು ಒಣ ಹಾಕಿ. ಇಲ್ಲವಾದಲ್ಲಿ ಬ್ಲೌಸಿನ ಕೈ ಅಡಿಭಾಗದ ಬಣ್ಣ ಮಾಸಿ ಹೋಗುತ್ತದೆ.
- ಸೀರೆಗೆ ತುಪ್ಪ, ಎಣ್ಣೆ ಪದಾರ್ಥಗಳು ಚೆಲ್ಲಿದರೆ ಕೂಡಲೇ ಪೌಡರ್ ಹಾಕಿ ಅನಂತರ ಶುಚಿಗೊಳಿಸಿ.
- ಸೀರೆಯಲ್ಲಿ ನೂಲು ಎದ್ದು ಬಂದು ಅದು ಎಲ್ಲಿಯಾದರೂ ಸಿಕ್ಕಿಕೊಂಡಾಗ ಎಳೆಯುವ ಬದಲು ಮೆಲ್ಲನೆ ಬಿಡಿಸಿ ತೆಗೆಯಲು ಪ್ರಯತ್ನಿಸಿ. ಕಷ್ಟವಾದರೆ ಮುಜುಗರ ಪಡದೆ ಇನ್ನೊಬ್ಬರ ಸಹಾಯ ಕೇಳಿ ಪಡೆಯಿರಿ.

- ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com