ಖಾಲಿಗೆ ಮದ್ದು ಹೇಳಿ!

ಖಾಲಿಗೆ ಮದ್ದು ಹೇಳಿ!
Updated on: 

ಕೂದಲು ಉದುರುವಿಕೆ ಬಹುತೇಕರ ತಲೆ ತಿನ್ನುವ ಸಮಸ್ಯೆ. ಸಾಮಾನ್ಯವಾಗಿ ಪೌಷ್ಟಿಕಾಂಶದ ಕೊರತೆ, ಕಬ್ಬಿಣಾಂಶದ ಕೊರತೆ, ಡಯಟಿಂಗ್, ಸ್ಟ್ರೆಸ್ ಮುಂತಾದ ಕಾರಣಗಳಿಂದ ಮಹಿಳೆಯರಲ್ಲಿ ತಲೆಕೂದಲು ಉದುರುತ್ತದೆ. ಮಗುವಿನ ಜನನದ ನಂತರವೂ ಕೂದಲು ಉದುರುವ ಸಮಸ್ಯೆ ತಲೆದೋರಬಹುದು. ಹಾರ್ಮೋನಿನ ತೊಂದರೆ ಅಂದರೆ ಥೈರಾಯ್ಡ್, ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್‌ನಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಮುಟ್ಟು ನಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಲ್ಲದೆ ಕೂದಲು ಉದುರುವಿಕೆ ಮಹಿಳೆಯರ ದೇಹದಲ್ಲಿರುವ ಬೇರೆ ರೋಗಗಳ ಲಕ್ಷಣಗಳನ್ನು ಕೂಡಾ ಸೂಚಿಸುತ್ತದೆ. ಇದೆಲ್ಲದರ ಜೊತೆಗೆ ನೆತ್ತಿಯಲ್ಲಿನ ಎಣ್ಣೆಯಂಶ ಹಾಗೂ ಹೊಟ್ಟಿನ ತೊಂದರೆ ಕೂದಲುದುರುವಿಕೆಯನ್ನು ಜಾಸ್ತಿ ಮಾಡುತ್ತದೆ.

ಸಮಸ್ಯೆಗೆ ಪರಿಹಾರ
ಮೊದಲು ಕೂದಲು ಯಾಕೆ ಉದುರುತ್ತಿದೆ ಎಂಬುದನ್ನು ಪತ್ತೆ ಮಾಡಿ, ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತಲೆಹೊಟ್ಟು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ತಲೆಹೊಟ್ಟಿನ ನಿಯಂತ್ರಣಕ್ಕೆ ಓಝೋನ್ ಚಿಕಿತ್ಸೆ, ಮನೆ ಮದ್ದಿನಂಥ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಲೆಹೊಟ್ಟು ಕಡಿಮೆಯಾದ ನಂತರ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಶಕ್ತಿಯ ಲೇಸರ್ ಲೈಟ್ ಚಿಕಿತ್ಸೆ ಅಥವಾ ಬೆಳವಣಿಗೆ ಅಂಶದ ಚಿಕಿತ್ಸೆ, ಆ್ಯಂಟಿ ಹೇರ್ಲಾಸ್ ಸೊಲ್ಯೂಷನ್ ಮತ್ತು ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಇನ್ನು ಮಾದರಿ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರು ಇರುವ ಕೂದಲನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಲೇಸರ್ ಚಿಕಿತ್ಸೆ ಅಥವಾ ಸಾಮಾನ್ಯ ಚಿಕಿತ್ಸೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಪಿಆರ್ಪಿ ಚಿಕಿತ್ಸೆ ಅಥವಾ ಹೇರ್ ಟ್ರಾನ್ಸ್‌ಪ್ಲಾಂಟ್ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಬಹುದು. ಒಂದು ವೇಳೆ ತಲೆಯಲ್ಲಿ ಹೊಸ ಕೂದಲು ಬೆಳವಣಿಗೆಯ ಸಮಸ್ಯೆ ಇದ್ದರೆ ಅವರ ದೇಹದ ಕೂದಲನ್ನು ತಲೆಗೆ ಟ್ರಾನ್ಸ್‌ಪ್ಲಾಂಟ್ ಮಾಡಲಾಗುತ್ತದೆ. ಅಸೆಲ್ ಮ್ಯಾಟ್ರಿಕ್ಸ್, ಅಟೋಲೋಗಸ್ ಸ್ಟೆಮ್‌ಸೆಲ್ಸ್ ಅಡ್ಮಿನಿಸ್ಟ್ರೇಷನ್ ಮುಂತಾದ ನೂತನ ಚಿಕಿತ್ಸೆಯ ಮೂಲಕವೂ ಕೂದಲಿನ ಬೆಳವಣಿಗೆ ಹೆಚ್ಚಿಸಬಹುದು.
ಇದರ ಜೊತೆಗೆ ತಮ್ಮ ಬೋಳು ತಲೆಯನ್ನು ಮರೆ ಮಾಚಿಕೊಳ್ಳಬಯಸುವವರಿಗೆ, ಸದ್ಯಕ್ಕೆ ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಿಕೊಳ್ಳಲು ಇಚ್ಚಿಸದವರಿಗೆ, ಕ್ಯಾನ್ಸರ್ ಕೀಮೋಥೆರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ, ಮಕ್ಕಳಿಗೆ ಬೇರೆಯದೇ ಚಿಕಿತ್ಸೆಗಳನ್ನು ನೀಡಲಾಗುವುದು.

ಚಿಕಿತ್ಸೆಯ ನಿರ್ಧಾರ ಹೇಗೆ?
ವೈದ್ಯರಿಂದ ಪರಿಶೀಲನೆ ಮಾಡಿಸಿ. ಸಮಸ್ಯೆಯ ತೀವ್ರತೆ ನೋಡಿ ಮನೆ ಮದ್ದು, ಲೇಸರ್ ಚಿಕಿತ್ಸೆ, ಉನ್ನತ ಮಟ್ಟದ ಚಿಕಿತ್ಸೆ ತೆಗೆದುಕೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಿ. ನಿಮ್ಮ ಸಮಸ್ಯೆಗೆ ಯಾವ ಚಿಕಿತ್ಸೆಯಿಂದ ಪರಿಹಾರ ಸಿಗುತ್ತೆ ಎಂದು ವೈದ್ಯರನ್ನು ಸಂಪರ್ಕಿಸಿ ಚರ್ಚಿಸಿ.

- ಡಾ. ದಿವ್ಯಾ ಶರ್ಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com