ಮನೆ ಯಾರಿಗೆ ಬೇಡ ಹೇಳಿ? ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲರಿಗೂ ಅದರ ಅಗತ್ಯ ಉಂಟು. ಹಬ್ಬದ ಸಮಯದಲ್ಲಿ ಟಾಟಾ ಹೌಸಿಂಗ್ ಡೆವಲಪ್ಮೆಂಟ್ 'ದಿ ರಿಜಾಯ್ಸ್ ಆಫರ್' ಎಂಬ ಯೋಜನೆ ಜಾರಿಗೆ ತಂದಿದೆ. ಟಾಟಾ ಹೌಸಿಂಗ್ನ ಅಂಗಸಂಸ್ಥೆ ಸ್ಮಾರ್ಟ್ ವ್ಯಾಲ್ಯೂ ಹೋಮ್ಸ್ನ 'ನ್ಯೂ ಹೆವನ್' ಯೋಜನೆ ಪ್ರಕಾರ 1 ಲಕ್ಷ ಪಾವತಿಸಿ, ಮನೆ ಹೊಂದುವ ಅವಕಾಶ ನೀಡುತ್ತಿದೆ. ಉಳಿದ ಹಣವನ್ನು 22 ಕಂತುಗಳ ಮೂಲಕ ಪ್ರತಿ ತಿಂಗಳು ರು. 28 ಸಾವಿರದಂತೆ ಪಾವತಿಸಹುದು ಅಥವಾ 2,50,000 ಪ್ರಕಾರ ನಾಲ್ಕು ಸಣ್ಣ ಕಂತುಗಳಲ್ಲಿ ಪಾವತಿಸಬಹುದು. ಮುಂದಿನ ತಿಂಗಳ 5ರ ವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಬೆಂಗಳೂರಿನಲ್ಲಿ ರು. 30 ಲಕ್ಷದಿಂದ ಆರಂಭವಾಗುತ್ತದೆ.