ಅಡುಗೆಮನೆಯಲ್ಲಿ ಎಂಥ ಎಲೆಕ್ಟ್ರಾನಿಕ್ ವಸ್ತುಗಳಿದ್ದರೂ ಬೇಸರವಾಗಲ್ಲ. ಯಾಕೆಂದರೆ ಬೇಗನೆ ಅಡುಗೆ ಆಗುತ್ತದೆ. ಈಗ ಇಂಥ ಸಾಲಿಗೆ ಡೀಪ್ ಫ್ರೈಯರ್ ಎಂಬ ಎಲೆಕ್ಟ್ರಾನಿಕ್ ವಸ್ತು ಬಂದಿದೆ. ಇದರ ಕೆಲಸ ಪದಾರ್ಥಗಳನ್ನು ಬೇಗನೆ ಬಿಸಿ ಮಾಡುವುದು ಹಾಗೂ ಚಿಪ್ಸ್, ಚಿಕನ್, ಮಶ್ರೂಮ್ ಸೇರಿದಂತೆ ಇತರೆ ವಸ್ತುಗಳನ್ನು ಬೇಗನೆ ಎಣ್ಣೆಯಲ್ಲಿ ಕರಿಯುತ್ತದೆ. ಎಣ್ಣೆ ಎಷ್ಟು ಹೀಟ್ ಆಗಿರಬೇಕೆಂದು ನೀವೇ ಬಟನ್ ಒತ್ತಬಹುದು. ಜತೆಗೆ ಕರಿದ ಪದಾರ್ಥಗಳನ್ನು ಹೊರತೆಗೆಯಲು ಆರು ಬಣ್ಣದ ಸ್ಟೈನ್ಲೆಸ್ ಸ್ಟೀಲ್ನಂತಿರುವ ತಂತಿಗಳನ್ನು ಇರುತ್ತವೆ. ಇದು ಜಿಡ್ಡಾಗುವುದಿಲ್ಲ. ಕೇವಲ ಒದ್ದೆ ಬಟ್ಟೆಯಿಂದ ಒರೆಸಿದರೆ ಸಾಕು ಸ್ವಚ್ಛವಾಗುತ್ತದೆ. ಅಂದಹಾಗೆ ಇದರ ಮೌಲ್ಯ 3,390.