ಸುಕ್ಕಿಗೆ ಸೂಜಿ!

ಅಯ್ಯೋ, ನನ್ ಮುಖ ಸುಕ್ಕುಗಟ್ಟಿದೆ. ಎಲ್ಲರ ಮುಂದೆ ಮುಖ ಎತ್ತಿ ನಡೆಯೋದು ಹೇಗೆ? ಎಂಬ ಆತಂಕ ನಿಮ್ಮನ್ನು ಕಾಡುತ್ತಿದೆಯೇ? ...
ಸುಕ್ಕಿಗೆ ಸೂಜಿ!
Updated on: 

ಅಯ್ಯೋ, ನನ್ ಮುಖ ಸುಕ್ಕುಗಟ್ಟಿದೆ. ಎಲ್ಲರ ಮುಂದೆ ಮುಖ ಎತ್ತಿ ನಡೆಯೋದು ಹೇಗೆ? ಎಂಬ ಆತಂಕ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದ್ರೆ ಇನ್ನು ಮುಂದೆ ಈ ಚಿಂತೆ ಬೇಡ. ಸುಕ್ಕುಗಟ್ಟಿದ ಚರ್ಮದ ನಿವಾರಣೆಗಾಗಿ ಹೇರ್‌ಲೈನ್ ಇಂಟರ್‌ನ್ಯಾಷನಲ್ 'ಸೆಲ್ಫಿಲ್ ಪ್ಲಾಸ್ಮಾ ಫೇಸ್‌ಲಿಫ್ಟ್‌' ಎಂಬ ಇಂಜೆಕ್ಷನ್ ಅನ್ನು ಪರಿಚಯಿಸಿದೆ.
ಏನಿದರ ವಿಶೇಷತೆ?
ಶಸ್ತ್ರಚಿಕಿತ್ಸೆ ಇಲ್ಲದೆಯೇ ಸುಕ್ಕು ನಿವಾರಿಸುವುದೇ ಸೆಲ್ಫಿಲ್ ವಿಶೇಷ. ರೋಗಿಯ ರಕ್ತದ ಮಾದರಿಯಿಂದ ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ (ಪಿಆರ್‌ಪಿ) ತೆಗೆದು, ಆಧುನಿಕ ತಂತ್ರಜ್ಞಾನ ಬಳಸಿ ಪಿಆರ್‌ಪಿಯನ್ನು ಚುಚ್ಚುಮದ್ದಿಗೆ ಬಳಸುವ ಜೆಲ್ ರೂಪಕ್ಕೆ ಮಾರ್ಪಾಡಿಸಲಾಗುತ್ತದೆ. ಇದನ್ನು ಮುಖ, ಕುತ್ತಿಗೆ ಅಥವಾ ಚರ್ಮ ಸುಕ್ಕುಗಟ್ಟಿದ ಜಾಗಕ್ಕೆ ನೀಡುತ್ತಾರೆ. ಇದು ಚರ್ಮದ ಸುಕ್ಕನ್ನು ಮರೆಮಾಚಿ ಕಾಂತಿ ನೀಡುತ್ತದೆ.
ಸೆಲ್ಫಿಲ್ ಪ್ಲಾಸ್ಮಾ ಫೇಸ್‌ಲಿಫ್ಟ್ ಇಂಜೆಕ್ಷನ್ ಕಣ್ಣು, ತುಟಿ, ಮೂಗು ಹಾಗೂ ಹಣೆಯ ಭಾಗದ ಸುಕ್ಕು ನಿವಾರಣೆಗೆ ಸಹಕಾರಿ ಎನ್ನುತ್ತಾರೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆ್ಯಂಡ್ ಟ್ರೀಟ್‌ಮೆಂಟ್‌ನ ಡರ್ಮಟೋಸರ್ಜನ್ ಹಾಗೂ ಹೇರ್ ಟ್ರಾನ್ಸ್‌ಪ್ಲಾಂಟ್ ಸ್ಪೆಷಲಿಸ್ಟ್ ಡಾ. ದಿನೇಶ್ ಗೌಡ. ಅಲ್ಲದೆ ಇದನ್ನು ಮುಖ ದುಂಡಗಾಗಿಸಲು, ಚರ್ಮವನ್ನು ಬಲಪಡಿಸಲು ಈ ಪ್ರಕ್ರಿಯೆ ಸಹಕಾರಿ ಎನ್ನುವುದು ಡಾ. ಗೌಡ ಅಭಿಪ್ರಾಯ.
ಅಡ್ಡ ಪರಿಣಾಮಗಳಿಲ್ಲ
ರೋಗಿಯ ಶರೀರದಿಂದ 5 ಮಿ.ಲೀ. ರಕ್ತ ಪಡೆದು ಪಿಆರ್‌ಪಿಯನ್ನು ಬಲಪಡಿಸಲಾಗುತ್ತದೆ. ಪಿಆರ್‌ಪಿಯು ಪ್ಲೇಟ್‌ಲೆಟ್ ಜತೆಗೆ ಮಾನವನ ಬೆಳವಣಿಗೆಗೆ ಸಹಕಾರಿಯಾದ ಫೈಬ್ರಿನ್, ಫೈಬ್ರೋನೆಕ್ಟಿನ್ ಒಳಗೊಂಡಿರುತ್ತದೆ. ಸೆಲ್ಫಿಲ್ ಪ್ಲಾಸ್ಮಾ ಫೇಸ್‌ಲಿಫ್ಟ್ ಚರ್ಮದ ಪುನರ್‌ಸೃಷ್ಟಿಸುವ ಸುಧಾರಿತ ಚಿಕಿತ್ಸೆ. ಅಷ್ಟೇ ಅಲ್ಲ, ಸೆಲ್ಫಿಲ್‌ನಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ ಹೇರ್‌ಲೈನ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಬಾನಿ ಆನಂದ್.
ಸೆಲ್ಫಿಲ್ ಚಿಕಿತ್ಸೆಯನ್ನು ತಿಂಗಳಿಗೊಮ್ಮೆಯಂತೆ 3 ತಿಂಗಳು ನೀಡುತ್ತಾರೆ. ಒಂದು ಬಾರಿ ನೀವು ಈ ಚಿಕಿತ್ಸೆ ಪಡೆದರೆ ನಿಮ್ಮ ಚರ್ಮದ ತಾಜಾತನ ಒಂದೂವರೆ ವರ್ಷದಿಂದ ಮೂರು ವರ್ಷದವರೆಗೂ ಹಾಗೆಯೇ ಇರುತ್ತದೆ ಎನ್ನುವುದು ಗಮನಾರ್ಹ.
ಹೆಚ್ಚಿನ ಮಾಹಿತಿಗಾಗಿ: 080-23551177 ಅಥವಾ 080-40914767.www. hairline.in ಸಂಪರ್ಕಿಸಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com