

ನೆಲ್ಲಿಕಾಯಿ ಮರದ ಮೇಲೆ ಕಾಣಿಸಿಕೊಳ್ಳುವುದು ಚಳಿಗಾಲದಲ್ಲಿ. ವಿಟಮಿನ್ 'ಸಿ' ಹೊಂದಿರುವ ನೆಲ್ಲಿಕಾಯಿಯು ಉಪ್ಪಿನಕಾಯಿ, ಜಾಮ್, ಚಟ್ನಿಯಾಗಿಯೂ ರೂಪಾಂತರಗೊಳ್ಳುತ್ತದೆ. ನೆಲ್ಲಿ ಉತ್ತಮ ಆಯುರ್ವೇದ ಔಷಧಿ. ಅತ್ಯುತ್ತಮ ಉತ್ತಮ ರೋಗನಿರೋಧಕ ಶಕ್ತಿ ಇದರಲ್ಲಿದೆ.
= ಅಜೀರ್ಣ, ಹೊಟ್ಟೆನೋವಿನ ಬಾಧೆಗೆ ಒಣಗಿಸಿಟ್ಟ ನೆಲ್ಲಿಕಾಯಿಯ ಬೀಜವನ್ನು ಮಜ್ಜಿಗೆ ಜತೆ ಅರೆದು ಕುಡಿದರೆ ನೋವು ಉಪಶಮನವಾಗುತ್ತದೆ.
= ಚರ್ಮದ ಕಾಂತಿಯುತ ಬೆಳವಣಿಗೆಗೆ ನೆಲ್ಲಿಕಾಯಿ ಪ್ರಯೋಜನಕಾರಿ. ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆ ಹೋಗಲಾಡಿಸಲು ನೆಲ್ಲಿಕಾಯಿಯ ರಸವನ್ನು ಹಚ್ಚಬೇಕು.
= ತಲೆಯ ಹೊಟ್ಟು, ಬಿಳಿಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ತಲೆಗೆ ಹಚ್ಚುತ್ತಾ ಬರಬೇಕು. ಕಾಂತಿಯುತ ತಲೆಗೂದಲು ಬೆಳೆಯಲು ಸಹಕಾರಿ.
= ನೆಲ್ಲಿಕಾಯಿಯಿಂದ ತಯಾರಿಸಿದ ಎಣ್ಣೆಯನ್ನು ಹಚ್ಚುತ್ತಾ ಬಂದರೆ ತಂಪಾಗಿರುತ್ತದೆ ಜತೆಗೆ ಕೂದಲೂ ಚೆನ್ನಾಗಿ ಬೆಳೆಯುತ್ತದೆ.
= ಜೀರ್ಣಕ್ರಿಯೆಗೆ ನೆಲ್ಲಿಕಾಯಿ ಉತ್ತಮವಾಗಿರುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಉಪಕಾರಿ.
= ರಕ್ತವನ್ನು ಶುದ್ಧಿ ಮಾಡುತ್ತದೆ.
= ಮುಖದ ಮೇಲಿನ ಮೊಡವೆ ನಿವಾರಣೆಗೂ ನೆಲ್ಲಿಕಾಯಿ ಪ್ರಯೋಜನಕಾರಿ.
= ದೇಹ ಆಯಾಸದಿಂದ ಬಳಲುತ್ತಿದ್ದರೆ ನೆಲ್ಲಿಕಾಯಿ ರಸಕ್ಕೆ ಏಲಕ್ಕಿಪುಡಿ, ಸಕ್ಕರೆ ಹಾಕಿ ಜ್ಯೂಸ್ ತಯಾರಿಸಿ ಕುಡಿದರೆ ಸುಸ್ತು ಪರಿಹಾರವಾಗುತ್ತದೆ.
= ನೆಲ್ಲಿಕಾಯಿಯನ್ನು ಬೇಯಿಸಿ ಉಪ್ಪಲ್ಲಿ ಹಾಕಿಟ್ಟುಕೊಂಡರೆ ಉಪ್ಪಿನಕಾಯಿಯಂತೆ ಹಾಗೂ ಅದರಿಂದ ಪದಾರ್ಥವನ್ನೂ ತಯಾರಿಸಬಹುದು.
= ನೆಲ್ಲಿ ಗಿಡದ ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅಜೀರ್ಣ, ಹೊಟ್ಟೆನೋವಿನ ಔಷಧಿಯಾಗಿ ಬಳಸಬಹುದು.
= ನೆಲ್ಲಿಯನ್ನು ಕತ್ತರಿಸಿ ಸಕ್ಕರೆ ಪಾಕದಲ್ಲಿ ಮಿಶ್ರಣ ಮಾಡಿ ಬಿಸಿಲಿನಲ್ಲಿ ಒಣಗಿಸಿಕೊಂಡರೆ ತಿನ್ನಲು ರುಚಿ.
ಸುಮನಾ ಉಪಾಧ್ಯಾಯ