ಕೇಶ ಕಾಂತಿಗೆ ನೆಲ್ಲಿ

ಕೇಶ ಕಾಂತಿಗೆ ನೆಲ್ಲಿ
Updated on: 

ನೆಲ್ಲಿಕಾಯಿ ಮರದ ಮೇಲೆ ಕಾಣಿಸಿಕೊಳ್ಳುವುದು ಚಳಿಗಾಲದಲ್ಲಿ. ವಿಟಮಿನ್ 'ಸಿ' ಹೊಂದಿರುವ ನೆಲ್ಲಿಕಾಯಿಯು ಉಪ್ಪಿನಕಾಯಿ, ಜಾಮ್, ಚಟ್ನಿಯಾಗಿಯೂ ರೂಪಾಂತರಗೊಳ್ಳುತ್ತದೆ. ನೆಲ್ಲಿ ಉತ್ತಮ ಆಯುರ್ವೇದ ಔಷಧಿ. ಅತ್ಯುತ್ತಮ ಉತ್ತಮ ರೋಗನಿರೋಧಕ ಶಕ್ತಿ ಇದರಲ್ಲಿದೆ.
=     ಅಜೀರ್ಣ, ಹೊಟ್ಟೆನೋವಿನ ಬಾಧೆಗೆ ಒಣಗಿಸಿಟ್ಟ ನೆಲ್ಲಿಕಾಯಿಯ ಬೀಜವನ್ನು ಮಜ್ಜಿಗೆ ಜತೆ ಅರೆದು ಕುಡಿದರೆ ನೋವು ಉಪಶಮನವಾಗುತ್ತದೆ.
=     ಚರ್ಮದ ಕಾಂತಿಯುತ ಬೆಳವಣಿಗೆಗೆ ನೆಲ್ಲಿಕಾಯಿ ಪ್ರಯೋಜನಕಾರಿ. ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆ ಹೋಗಲಾಡಿಸಲು ನೆಲ್ಲಿಕಾಯಿಯ ರಸವನ್ನು ಹಚ್ಚಬೇಕು.
=     ತಲೆಯ ಹೊಟ್ಟು, ಬಿಳಿಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ತಲೆಗೆ ಹಚ್ಚುತ್ತಾ ಬರಬೇಕು. ಕಾಂತಿಯುತ ತಲೆಗೂದಲು ಬೆಳೆಯಲು ಸಹಕಾರಿ.
=     ನೆಲ್ಲಿಕಾಯಿಯಿಂದ ತಯಾರಿಸಿದ ಎಣ್ಣೆಯನ್ನು ಹಚ್ಚುತ್ತಾ ಬಂದರೆ ತಂಪಾಗಿರುತ್ತದೆ ಜತೆಗೆ ಕೂದಲೂ ಚೆನ್ನಾಗಿ ಬೆಳೆಯುತ್ತದೆ.
=     ಜೀರ್ಣಕ್ರಿಯೆಗೆ ನೆಲ್ಲಿಕಾಯಿ ಉತ್ತಮವಾಗಿರುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಉಪಕಾರಿ.
=  ರಕ್ತವನ್ನು ಶುದ್ಧಿ ಮಾಡುತ್ತದೆ.
=  ಮುಖದ ಮೇಲಿನ ಮೊಡವೆ ನಿವಾರಣೆಗೂ ನೆಲ್ಲಿಕಾಯಿ ಪ್ರಯೋಜನಕಾರಿ.
= ದೇಹ ಆಯಾಸದಿಂದ ಬಳಲುತ್ತಿದ್ದರೆ ನೆಲ್ಲಿಕಾಯಿ ರಸಕ್ಕೆ ಏಲಕ್ಕಿಪುಡಿ, ಸಕ್ಕರೆ ಹಾಕಿ ಜ್ಯೂಸ್ ತಯಾರಿಸಿ ಕುಡಿದರೆ ಸುಸ್ತು ಪರಿಹಾರವಾಗುತ್ತದೆ.
= ನೆಲ್ಲಿಕಾಯಿಯನ್ನು ಬೇಯಿಸಿ ಉಪ್ಪಲ್ಲಿ ಹಾಕಿಟ್ಟುಕೊಂಡರೆ ಉಪ್ಪಿನಕಾಯಿಯಂತೆ ಹಾಗೂ ಅದರಿಂದ ಪದಾರ್ಥವನ್ನೂ ತಯಾರಿಸಬಹುದು.
= ನೆಲ್ಲಿ ಗಿಡದ ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅಜೀರ್ಣ, ಹೊಟ್ಟೆನೋವಿನ ಔಷಧಿಯಾಗಿ ಬಳಸಬಹುದು.
=     ನೆಲ್ಲಿಯನ್ನು ಕತ್ತರಿಸಿ ಸಕ್ಕರೆ ಪಾಕದಲ್ಲಿ ಮಿಶ್ರಣ ಮಾಡಿ ಬಿಸಿಲಿನಲ್ಲಿ ಒಣಗಿಸಿಕೊಂಡರೆ ತಿನ್ನಲು ರುಚಿ.

  ಸುಮನಾ ಉಪಾಧ್ಯಾಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com