

ಕಠ್ಮಂಡು: "ನೇಪಾಳದಲ್ಲಿ ಇಸ್ಲಾಂ ಉಳಿಯ ಬೇಕು ಅಂದ್ರೆ ನೇಪಾಳ ಹಿಂದೂ ರಾಜ್ಯವಾಗಬೇಕು'' ಇಂಥ ಅಚ್ಚರಿಯ ಅಭಿಪ್ರಾಯ ಬಂದಿರುವುದು ಮೂಲ ನೇಪಾಳಿಗಳಿಂದಲೋ ಹಿಂದೂಗಳಿಂದಲೋ ಅಲ್ಲ. ನೇಪಾಳದ ಮುಸಲ್ಮಾನರೇ ಹೇಳಿರುವ ಮಾತಿದು.
ನೇಪಾಳದಲ್ಲಿ ಹಿಂದೂರಾಜ್ಯ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ರಾಪ್ಟಿ ಮುಸ್ಲಿಂ ಸಮಾಜದ ಅಧ್ಯಕ್ಷ ಅಮ್ಜದ್ ಅಲಿ ಈ ಮಾತುಗಳನ್ನಾಡಿದ್ದು, ``ಈ ಹೋರಾಟ ಇಸ್ಲಾಂ ರಕ್ಷಣೆಗಾಗಿ. ನಾನು ನನ್ನ ಧರ್ಮವನ್ನು ರಕ್ಷಿಸಿಕೊಳ್ಳುವ ಸಲುವಾಗಿ ನೇಪಾಳವನ್ನು ಹಿಂದೂ ರಾಜ್ಯವೆಂದು ಘೋಷಿಸಿ ಎಂದು ಒತ್ತಾಯಿಸುತ್ತಿದ್ದೇನೆ'' ಎಂದಿದ್ದಾರೆ.