

ಇಸ್ಲಾಮಾಬಾದ್: ಪಾಕಿಸ್ತಾನ ವಿದೇಶಾಂಗ ಇಲಾಖೆಯ ಸಲಹೆಗಾರ ಸರ್ತಾಜ್ ಅಜೀಜ್ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ್ದು ಎಲ್ಲಾ ಸಮಸ್ಯೆಗಳಿಗೂ ಮಾತುಕತೆಯೇ ಪರಿಹಾರ ಎಂದು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಪಾಕಿಸ್ತಾನ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿರುವ ಪಾಕ್ ವಿದೇಶಾಂಗ ಇಲಾಖೆ ಸಲಹೆಗಾರ, ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲು ಮಾತುಕತೆಯೊಂದೇ ಪರಿಹಾರ ಎಂದಿದ್ದಾರೆ.
ಈ ವರೆಗೂ ದ್ವಿಪಕ್ಷೀಯ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ, ಆದರೆ ಭಾರತದ ಷರತ್ತುಗಳನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದ ಸರ್ತಾಜ್ ಅಜೀಜ್ ಈಗ ಎಲ್ಲಾ ಸಮಸ್ಯೆಗಳಿಗೂ ಮಾತುಕತೆಯೇ ಪರಿಹಾರ ಎಂದಿದ್ದಾರೆ. ಹಾರ್ಟ್ ಏಷ್ಯಾದ" ಭದ್ರತಾ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನ.8 ರಂದು ಇಸ್ಲಾಮಾಬಾದ್ ಗೆ ಭೇಟಿ ನೀಡಲಿದ್ದು ಹಾರ್ಟ್ ಏಷ್ಯಾದ" ಭದ್ರತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.