

ನ್ಯೂಯಾರ್ಕ್: ಪತಿಯೊಂದಿಗೆ ಸೇರಿ ಕ್ಯಾಲಿಫೋರ್ನಿಯಾದಲ್ಲಿ 14 ಮಂದಿ ಬಲಿ ತೆಗೆದುಕೊಂಡ ಶಂಕಿತ ಪಾಕಿಸ್ತಾನ ಮಹಿಳೆ ತಶ್ಫೀನ್ ಮಲಿಕ್ 2013 ರಲ್ಲಿ ಭಾರತಕ್ಕೂ ಭೇಟಿ ನೀಡಿದ್ದಳೆಂದು, ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಎರಡು ಬಾರಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಮಲಿಕ್, ಒಮ್ಮೆ ಭಾರತಕ್ಕೂ ಭೇಟಿ ನೀಡಿದ್ದಳೆಂದು ಸೌದಿ ಆಂತರಿಕ ಸಚಿವಾಲಯದ ವಕ್ತಾರ ಮನ್ಸೂರ್ ಟರ್ಕಿ ತಿಳಿಸಿರುವುದಾಗಿ ಪತ್ರಿಕೆ ಹೇಳಿದೆ.
'2013ರ ಜೂನ್ 8ರಂದು ಪಾಕಿಸ್ತಾನದಿಂದ ಜೆಡ್ಡಾದಲ್ಲಿ ನೆಲೆಸಿದ್ದ ತಂದೆಯನ್ನು ಕಾಣಲು ಸೌದಿಗೆ ಬಂದ ತಶ್ವೀನ್, ಅ.6ರಂದು ಭಾರತಕ್ಕೂ ತೆರಳಿದ್ದಳು' ಎಂದು ಟರ್ಕಿ ಸರ್ಕಾರ ಹೇಳಿದೆ. ಆದರೆ ಆಕೆ ಭಾರತದಲ್ಲಿ ಎಲ್ಲಿ, ಎಷ್ಟು ದಿನ ತಂಗಿದ್ದಳು ಎಂಬ ಬಗ್ಗೆ ಯಾವುದೇ ವಿವರಗಳು ವರದಿಯಲ್ಲಿಲ್ಲ.