ಸೌದಿಯ ನೈರುತ್ಯ ಪ್ರಾಂತ್ಯದ ಜಿಝಾನ್ ಎಂಬಲ್ಲಿನ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿತ್ತು. ಆಸ್ಪತ್ರೆಯ ತುರ್ತು ನಿಗಾ ಘಟಕ, ಪ್ರಸೂತಿ ಮತ್ತು ನವಜಾತ ಶಿಶುಗಳ ನಿಗಾ ವಾಡ್ರ್ ನಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಕಾಣಿಸಿ ಕೊಂಡಿದ್ದು, ಕ್ಷಣಮಾತ್ರದಲ್ಲಿ ಇಡೀ ಆಸ್ಪತ್ರೆ ಯಾದ್ಯಂತ ವ್ಯಾಪಿಸಿತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದ್ದಾರೆ.