ದುಬೈನ ಬೃಹತ್ ಹೊಟೇಲ್ ನಲ್ಲಿ ಅಗ್ನಿ ದುರಂತ: 16 ಗಾಯ

ಹೊಸ ವರ್ಷಾಚರಣೆ ವೇಳೆ ದುಬೈನ ಬೃಹತ್ ಹೊಟೇಲ್ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ 16 ಮಂದಿ ಗಾಯಗೊಂಡಿದ್ದಾರೆ...
ಹೊಟೇಲ್
ಹೊಟೇಲ್

ದುಬೈ: ಹೊಸ ವರ್ಷಾಚರಣೆ ವೇಳೆ ದುಬೈನ ಬೃಹತ್ ಹೊಟೇಲ್ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ 16 ಮಂದಿ ಗಾಯಗೊಂಡಿದ್ದಾರೆ.

ಜಗತ್ತಿನ ಅತೀ ಎತ್ತರದ ಕಟ್ಟಡ ಎಂಬ ಖ್ಯಾತಿ ಗಳಿಸಿರುವ ದುಬೈನ ಬುರ್ಜ್ ಖಲಿಫಾ ಪಕ್ಕದಲ್ಲೇ ಇರುವ 63 ಅಂತಸ್ತಿನ ಬೃಹತ್ ಹೊಟೇಲ್ ನಲ್ಲಿ ಹೊಸ ವರ್ಷಾಚರಣೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಒಂದು ಹಂತದಲ್ಲಿ ಕಾಣಿಸಿಕೊಂಡ ಬೆಂಕಿ ಇತರ ಅಂತಸ್ತುಗಳಿಗೆ ವ್ಯಾಪಿಸಿದ್ದು ಈ ಅವಗಡದಲ್ಲಿ 16 ಮಂದಿಗೆ ಸುಟ್ಟ ಗಾಯಗಳಾಗಿವೆ.

ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೊಟೇಲ್ ನಲ್ಲಿ ತಂಗಿದ್ದವರನ್ನು ಸ್ಥಳಾಂತರಿಸಲಾಗಿದೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಅಗ್ನಿ ದುರಂತಕ್ಕೆ ಕಾರಣವೆನೆಂದು ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com