ಭಾರತ ಕದನ ವಿರಾಮ ಉಲ್ಲಂಘಿಸುತ್ತಿದೆ: ಪಾಕಿಸ್ತಾನದ ಆರೋಪ

ಭಾರತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪಾಕಿಸ್ತಾನ ಸೇನೆ(ಸಂಗ್ರಹ ಚಿತ್ರ)
ಪಾಕಿಸ್ತಾನ ಸೇನೆ(ಸಂಗ್ರಹ ಚಿತ್ರ)
Updated on: 

ಇಸ್ಲಾಮಾಬಾದ್: ಭಾರತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ಪಾಕಿಸ್ತಾನವಾದರೂ ಭಾರತದ ಮೇಲೆ ಆರೋಪಿಸಿದೆ.

ಈ ವಾರದಲ್ಲಿ ನಡೆದ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಕಾಶ್ಮೀರ ಪ್ರದೇಶದ 4 ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಬಿ.ಎಸ್. ಎಫ್ ಯೋಧರು, ಪೂಂಚ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘನೆಮಾಡಿದ್ದ ಪಾಕಿಸ್ತಾನ ಸೈನಿಕರ ಮೇಲೆ ಶೆಲ್ ಗಳಿಂದ ದಾಳಿ ನಡೆಸಿದ್ದರು. ಇದಾದ ಬಳಿಕ ಪಾಕಿಸ್ತಾನ ಭಾರತದ ಮೇಲೆ ಆರೋಪ ಮಾಡಿದೆ.

ಕಳೆದ ವರ್ಷದಂತೆಯೇ ಈ ವರ್ಷವೂ ರಂಜಾನ್ ಸಂದರ್ಭದಲ್ಲಿ ಭಾರತ ಕದನ ವಿರಾಮ ಉಲ್ಲಂಘನೆ ಮಾಡಿರುವುದು ವಿಶಾದನೀಯ ಇದರಿಂದ  ಅಮಾಯಕ ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಪ್ರಚೋದನಕಾರಿ ಆಕ್ಟ್ ಅಡಿಯಲ್ಲಿ ಭಾರತದ ಕ್ರಮಕ್ಕೆ ತನ್ನ ವಿರೋಧವೊಡ್ಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com