ಗಡಾಫಿ ಪುತ್ರ ಸೈಫ್ ಗೆ ಗಲ್ಲು

2011ರ ಕ್ರಾಂತಿಯ ಸಮಯದ ಯುದಾಟಛಿಪರಾಧಿಗಳೆಂದು ಪರಿಗಣಿಸಿ ಲಿಬಿಯಾದ ಕೋರ್ಟ್ ಪದಚ್ಯುತ ನಾಯಕ ಕರ್ನಲ್ ಮುವಮ್ಮರ್ ಗಡಾಫಿಯ ಪುತ್ರ ಸೈಫ್ ಅಲ್ ಇಸ್ಲಾಮ್ ಗಡಾಫಿ..
ಸೈಫ್ ಅಲ್ ಇಸ್ಲಾಮಿ ಗಡಾಫಿ
ಸೈಫ್ ಅಲ್ ಇಸ್ಲಾಮಿ ಗಡಾಫಿ

ಕೈರೋ: 2011ರ ಕ್ರಾಂತಿಯ ಸಮಯದ ಯುದಾಟಛಿಪರಾಧಿಗಳೆಂದು ಪರಿಗಣಿಸಿ ಲಿಬಿಯಾದ ಕೋರ್ಟ್ ಪದಚ್ಯುತ ನಾಯಕ ಕರ್ನಲ್ ಮುವಮ್ಮರ್ ಗಡಾಫಿಯ ಪುತ್ರ ಸೈಫ್ ಅಲ್ ಇಸ್ಲಾಮ್ ಗಡಾಫಿ ಹಾಗೂ ಎಂಟು ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಗಡಾಫಿಯ 37 ಮಂದಿ ಸಹಚರರು 2011ರ ಕ್ರಾಂತಿಯಲ್ಲಿ ಶಾಂತಿ ಪ್ರತಿಭಟನೆಯನ್ನು ಕದಡಿ ದಂಗೆ ಏಳಲು ಕಾರಣರಾದ ಆರೋಪ ಎದುರಿಸುತ್ತಿದ್ದರು. ದಂಡನೆಗೊಳಗಾಗಿ ರುವ ಸೈಫ್ ಅಲ್ ಇಸ್ಲಾಮ್ ಕೋರ್ಟ್‍ಗೆ ಹಾಜರಾಗುವ ಬದಲು ವಿಡಿಯೋ ಲಿಂಕ್ ಮೂಲಕ ಸಾಕ್ಷ್ಯ ಒದಗಿಸಿದ್ದರು. ಗಡಾಫಿ ಅವಧಿಯಲ್ಲಿ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಅಬ್ದುಲ್ಲಾ ಅಲ್ ಸೆನುಸ್ಸಿ, ಮಾಜಿ ಪ್ರಧಾನಿ ಬಘ್ದಾದಿ ಅಲ್ ಮಹ್ಮೌದಿ ಕೂಡ ಶಿಕ್ಷೆಗೊಳಗಾದವರ ಪಟ್ಟಿಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com