ಪ್ಯಾರಿಸ್ ನಲ್ಲಿ ನಾಲೆಗೆ ಉರುಳಿದ ಹೈಸ್ಫೀಡ್ ರೈಲು: 10 ಮಂದಿ ಸಾವು

ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಹೈಸ್ಫೀಡ್ ರೈಲು ಹಳಿ ತಪ್ಪಿ ನಾಲೆಗೆ ಉರುಳಿಬಿದ್ದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ...
ಹೈ ಸ್ಪೀಡ್ ರೈಲು
ಹೈ ಸ್ಪೀಡ್ ರೈಲು

ಪ್ಯಾರಿಸ್: ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಹೈಸ್ಫೀಡ್ ರೈಲು ಹಳಿ ತಪ್ಪಿ ನಾಲೆಗೆ ಉರುಳಿಬಿದ್ದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.

ಸ್ಟಾರ್ಸ್ ಬರ್ಗ್ ನಿಂದ ಪ್ಯಾರಿಸ್‌ಗೆ ಸಂಚರಿಸುತ್ತಿದ್ದ ಹೈಸ್ಫೀಡ್ ರೈಲಿನಲ್ಲಿ 49 ಪ್ರಯಾಣಿಕರಿದ್ದು ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿತ್ತು. ಈ ರೈಲು ಅತಿ ವೇಗ ಪಡೆದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಇನ್ನುಳಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಹೈಸ್ಫೀಡ್ ರೈಲು ಹಳಿ ತಪ್ಪಿ ಪಕ್ಕದಲ್ಲೆ ಇದ್ದ ನೀರಿನ ನಾಲೆಗೆ ಬಿದ್ದಿದೆ. ಬಿದ್ದ ರಭಸಕ್ಕೆ ರೈಲು ಸಂಪೂರ್ಣ ನಜ್ಜು-ಗುಜ್ಜಾಗಿದೆ. ಸ್ಥಳಕ್ಕೆ ದಾವಿಸಿದ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com