ಶಾಂಘೈ: ಚೀನಾ ಸರ್ಕಾರ ಅತಿದೊಡ್ಡ ಭೂಗತ ಬ್ಯಾಂಕಿಂಗ್ ಜಾಲವನ್ನು ಭೇದಿಸಿದ್ದು 370 ಮಂದಿಯನ್ನು ಬಂಧಿಸಿದೆ. ಇವರು 6,400 ಕೋಟಿ ಡಾಲರ್‍ಗಳನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾಯಿಸಿದ್ದರು ಎಂದು ಚೀನಾ ಸರ್ಕಾರದ ಪ್ರಕಟಣೆ ಹೇಳಿದೆ.
ಕಳೆದ ಏಪ್ರಿಲ್‍ನಿಂದ ಇದುವರೆಗೂ ಇಲ್ಲಿನ ಭದ್ರತಾ ಅಧಿಕಾರಿಗಳು 12,600 ಕೋಟಿ ಡಾಲರ್ ಮೌಲ್ಯದ ಭೂಗತ ಹಣಕಾಸು ವಹಿವಾಟನ್ನು ಭೇದಿಸಿದ್ದಾರೆ.
ಚೀನಾದಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದ ಕಠಿಣ ನಿಯಮಗಳಿದ್ದು ವ್ಯಕ್ತಿಯೊಬ್ಬರು ವರ್ಷಕ್ಕೆ 50 ಸಾವಿರ ಡಾಲರ್ ಮಾತ್ರ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಭ್ರಷ್ಟ ಅಧಿಕಾರಿಗಳು, ಅಪರಾಧಿಗಳು ಮತ್ತು ಭಯೋತ್ಪಾದಕರು ಇಂತಹ ಜಾಲವನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.