ಕಪ್ಪುಹಣ: ಫಾಲ್ಸಿಯಾನಿಗೆ 5 ವರ್ಷ ಜೈಲು

ಎಚ್‍ಎಸ್‍ಬಿಸಿ ಬ್ಯಾಂಕ್‍ನಲ್ಲಿ ಕಪ್ಪುಹಣ ಇರಿಸಿದ ವ್ಯಕ್ತಿಗಳು, ಸಂಸ್ಥೆಗಳ ಮಾಹಿತಿ ಬಹಿರಂಗ ಮಾಡಿದ ಬ್ಯಾಂಕ್‍ನ ಮಾಜಿ ಉದ್ಯೋಗಿ...
ಫಾಲ್ಸಿಯಾನಿ
ಫಾಲ್ಸಿಯಾನಿ
ಬೆಲ್ಲಿಂಝೋನಾ: ಎಚ್‍ಎಸ್‍ಬಿಸಿ ಬ್ಯಾಂಕ್‍ನಲ್ಲಿ ಕಪ್ಪುಹಣ ಇರಿಸಿದ ವ್ಯಕ್ತಿಗಳು, ಸಂಸ್ಥೆಗಳ ಮಾಹಿತಿ ಬಹಿರಂಗ ಮಾಡಿದ ಬ್ಯಾಂಕ್‍ನ ಮಾಜಿ ಉದ್ಯೋಗಿ ಹೆರ್ವೆ ಫಾಲ್ಸಿಯಾನಿಗೆ ಸ್ವಿಜರ್ಲೆಂಡ್ ಸರ್ಕಾರ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 
ಬ್ಯಾಂಕಿನ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆತ ರಹಸ್ಯ ಮಾಹಿತಿಗಳನ್ನು ಕದ್ದು 2008ರಲ್ಲಿ ಫಾ್ರನ್ಸ್‍ನಿಂದ ಪಲಾಯನ ಮಾಡಿದ್ದ. ಇದೊಂದು ಸ್ವಾಗತಾರ್ಹ ನಿರ್ಧಾರ ಎಂದಿದೆ ಬ್ಯಾಂಕ್. 
ಇದೇ ವೇಳೆ ಎನ್‍ಡಿಟಿವಿ ಜತೆಗೆ ಮಾತನಾಡಿದ ಹೆರ್ವೆ ಕಪ್ಪುಹಣ ಬಹಿರಂಗಕ್ಕೆ ನೆರವು ನೀಡುವುದನ್ನು ಬಿಡುವುದಿಲ್ಲ. ಅದರ ಮೂಲ ಪತ್ತೆ ಹಚ್ಚಲು ನೆರವು ನೀಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com