

ವಾಷಿಂಗ್ಟನ್:ಶಾಂತಿ ಪಾಲನೆ ವಿಷಯದಲ್ಲಿ ಭಾರತದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿಲ್ಲ ಎಂದು ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ದೂರಿದ್ದಾರೆ.
ಭಾರತವೂ ಸೇರಿದಂತೆ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಪಾಕಿಸ್ತಾನ ಸೌಹಾರ್ದಯುತ ಸಂಬಂಧ ಹೊಂದಲು ಬಯಸುತ್ತಿದ್ದು, ಸ್ನೇಹಪರ ಸಂಬಂಧವನ್ನು ಮುಂದುವರೆಸಲು ಸಾಕಷ್ಟು ಶ್ರಮಿಸುತ್ತಿದೆ. ಕಾಶ್ಮೀರ ವಿವಾದ ಇತ್ಯರ್ಥವಾದರೆ ಭಾರತ-ಪಾಕಿಸ್ತಾನ ಭಾಗದಲ್ಲಿ ನಿಜವಾಗಿಯೂ ಶಾಂತಿ ನೆಲೆಸುತ್ತದೆ. ಆ ಭಾಗದಲ್ಲಿ ಶಾಂತಿ ಕದಡುತ್ತಿರುವುದು ಕಾಶ್ಮೀರ ವಿವಾದ ವಿಷಯ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಷಯ ಎಂದು ಅಮೆರಿಕಾದಲ್ಲಿರುವ ಪಾಕಿಸ್ತಾನಿ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಷರೀಫ್ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ನವಾಜ್ ಶರೀಫ್, ಬರಾಕ್ ಒಬಾಮ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ಯುಎಸ್ ಉಪಾಧ್ಯಕ್ಷ ಸೇರಿದಂತೆ ಹಲವು ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.