ಹರ್ಕತುಲ್ ಉಗ್ರರಿಗೆ ಬೆಂಬಲ ನಿಲ್ಲಿಸಿದ್ದ ಪಾಕ್

ಭಾರತದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದ್ದ ಹರ್ಕತ್ ಉಲ್ ಅನ್ಸಾರ್ ಉಗ್ರ ಸಂಘಟನೆಗೆ ಪಾಕಿಸ್ತಾನ ನೆರವು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವಾಷಿಂಗ್ಟನ್: ಭಾರತದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದ್ದ ಹರ್ಕತ್ ಉಲ್ ಅನ್ಸಾರ್ ಉಗ್ರ ಸಂಘಟನೆಗೆ ಪಾಕಿಸ್ತಾನ ನೆರವು ಕೈ ಬಿಡುವ ಹಿಂದಿನ ರಹಸ್ಯ ಇದೀಗ ಬಯಲಾ ಗಿದೆ. ಒಂದು ವೇಳೆ ನೆರವು ಮುಂದುವರಿಸಿ ದರೆ ``ಭಯೋತ್ಪಾದನೆಗೆ ನೆರವು ನೀಡುತ್ತಿರುವ ದೇಶಗಳ'' ಪಟ್ಟಿಗೆ ಸೇರ್ಪಡೆಯಾಗುವ ಭೀತಿ ಯಿಂದ ಪಾಕ್ ಈ ನಿರ್ಧಾರ ಕೈಗೊಂಡಿತ್ತು. ಈ ವಿಚಾರವನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎನ 1996ರ ವರದಿ ಬಹಿರಂಗ ಪಡಿಸಿದೆ. ಕಾಶ್ಮೀರದಲ್ಲಿ, ಭಾರತದ ಇತರೆ ಭಾಗ ಗಳಲ್ಲಿ ಅದರಲ್ಲೂ ಮುಖ್ಯವಾಗಿ 1996ರ ದೆಹಲಿಯ ಲಜಪತ್ ನಗರ್ ಮಾರ್ಕೆಟ್ ಸ್ಫೋಟದಲ್ಲಿ ಹರ್ಕತ್ ಉಲ್ ಅನ್ಸಾರ್ ಕೈವಾಡ ಇರುವುದನ್ನು ಈ ವರದಿ ಖಚಿತಪಡಿಸಿದೆ. ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಪ್ರತಿ ತಿಂಗಳು ಹರ್ಕತ್ ಉಗ್ರ ಸಂಘಟನೆಗೆ ಪ್ರತಿ ತಿಂಗಳು ರು.20ರಿಂದ ರು.40 ಲಕ್ಷದ ವರೆಗೆ ಹಣ ಕಾಸು ನೆರವು ನೀಡುತ್ತಿತ್ತು. ಜತೆಗೆ, ಕಂದ ಹಾರ್ ವಿಮಾನ ಅಪಹರಣಕ್ಕೂ 3 ವರ್ಷಗಳ ಮೊದಲೇ ಹಕ್ತತ್ ಇಂಥದ್ದೊಂದು ಸಂಚು ರೂಪಿಸುತ್ತಿತ್ತು ಎನ್ನುವ ಮಾಹಿತಿಯೂ ಸಿಐಎ ಗಿತ್ತು ಎಂದು ವರದಿಯಿಂದ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com