ನೇಪಾಳ ಪ್ರವಾಸೋದ್ಯಮ ಮರುಹುಟ್ಟು

ಭೂಕಂಪದಿಂದ ಮಂಕಾಗಿದ್ದ ನೇಪಾಳ ಪ್ರವಾಸೋದ್ಯಮ ಪುಟಿದೇಳುವ ಉತ್ಸಾಹ ತೋರಿಸಿದೆ...
ನೇಪಾಳ
ನೇಪಾಳ
Updated on: 
ನೇಪಾಳ: ಭೂಕಂಪದಿಂದ ಮಂಕಾಗಿದ್ದ ನೇಪಾಳ ಪ್ರವಾಸೋದ್ಯಮ ಪುಟಿದೇಳುವ ಉತ್ಸಾಹ ತೋರಿಸಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ನೇಪಾಳದಲ್ಲಿ ಭೂಕಂಪದ ತರುವಾಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಇದಕ್ಕೆ ತಪ್ಪು ಸಂದೇಶಗಳು ರವಾನೆಯಾಗಿದ್ದೂ ಕಾರಣ. ಆದರೆ ಈಗ ಅಲ್ಲಿನ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. 
ಪ್ರವಾಸೋದ್ಯಮಕ್ಕೆ ಪುನಶ್ಚೇತನಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದು ಅಲ್ಲಿನ ಪ್ರವಾಸೋದ್ಯಮ ಮಂಡಳಿ ಮುಖ್ಯಸ್ಥರಾದ ಉಜ್ವಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೇಪಾಳದ 75 ಜಿಲ್ಲೆಗಳಲ್ಲಿ 14 ಕಡೆಗಳಲ್ಲಷ್ಟೇ ಭೂಕಂಪದಿಂದ ಹಾನಿಯಾಗಿದೆ. ಕೆಲವೇ ಕೆಲವ ಸ್ಮಾರಕ, ಪ್ರವಾಸಿ ಕಟ್ಟಡಗಳಿಗೆ ಹಾನಿಯಾಗಿದೆ. ಇವುಗಳನ್ನು ಸರಿಪಡಿಸುವ ಕೆಲಸ ನಡೆದಿದೆ. ಇನ್ನು ಸಂಚಾರ ವ್ಯವಸ್ಥೆ, ಹೊಟೆಲ್ ಉದ್ಯಮ ಸಹಜ ಸ್ಥಿತಿಗೆ ಬಂದಿದ್ದು ಅಂತರಾಷ್ಟ್ರೀಯ ಪ್ರವಾಸಿಗರು ಯಾವುದೇ ಅಳುಕಿಲ್ಲದೇ ನೇಪಾಳಕ್ಕೆ ಬರಬಹುದು ಎಂದರು. ನೇಪಾಳ ಪ್ರವಾಸೋದ್ಯಮಕ್ಕೆ ಹೊಸ ಇಮೇಜ್ ತರುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. 
ವಿಶ್ವದ ಮುಂಚೂಣಿಗೆ 'ನೇಪಾಳ್ ಬ್ಯಾಕ್' ಎಂಬ ಪ್ರವಾಸೋದ್ಯಮ ಶೀರ್ಷಿಕೆ ಇಟ್ಟುಕೊಂಡು ವಿವಿಧ ದೇಶಗಳಲ್ಲಿ ರೋಡ್ ಶೋ ಆರಂಭಿಸಿದ್ದೇವೆ. ಬೆಂಗಳೂರಿನಿಂದಲೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಗುರಿ ಎಂದ ಅವರು, ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇವೆ, ವಿಮಾನ ಪ್ರಯಾಣ ದರ ಕೂಡ ಕಡಿತಗೊಂಡಿದೆ. ಕೆಲವು ಕ್ಷೇತ್ರಗಳಲ್ಲಿ ತೆರಿಗೆ ತೆಗೆದುಹಾಕಲಾಗಿದೆ. ಜೊತೆಗೆ ಪ್ರಧಾನಿ ಮೋದಿಯವರ ನೇಪಾಳ ಭೇಟಿಯ ತರುವಾಯ ಭಾರತದ ಸರ್ಕಾರಿ ನೌಕರರಿಗೆ ನೀಡುವ ಎಲ್‍ಟಿಸಿ ಸೌಲಭ್ಯ ಕೂಡ ನೇಪಾಳಕ್ಕೆ ಅನ್ವಯವಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com