ಆಯ್ಲನ್ ಕುದ್ರಿ ನಂತರ, ಸಮುದ್ರ ದಡದಲ್ಲಿ ಮತ್ತೊಬ್ಬ ಸಿರಿಯಾ ಬಾಲಕಿ ಶವಪತ್ತೆ

ಬಾಲಕ ಆಯ್ಲನ್ ಕುದ್ರಿ ಸಾವಿಗೆ ಇಡೀ ಪ್ರಪಂಚವೇ ಕಂಬನಿ ಮಿಡಿದು, ಆ ಪ್ರಕರಣ ಜನ ಮಾನಸದಿಂದ ಮರೆಯುವ ಮುನ್ನವೇ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಥೆನ್ಸ್‌: ಬಾಲಕ ಆಯ್ಲನ್ ಕುದ್ರಿ ಸಾವಿಗೆ ಇಡೀ ಪ್ರಪಂಚವೇ ಕಂಬನಿ ಮಿಡಿದು, ಆ ಪ್ರಕರಣ ಜನ ಮಾನಸದಿಂದ ಮರೆಯುವ ಮುನ್ನವೇ ಸಿರಿಯಾದ ವಲಸಿಗರಿದ್ದ ದೋಣಿ ಗ್ರೀಸ್ ಕರಾವಳಿಯಲ್ಲಿ ಶನಿವಾರ ಮುಳುಗಿ ಸಿರಿಯಾದ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ. ಗ್ರೀಕ್‌ ಕರಾವಳಿ ಕಾವಲು ಪಡೆ ಈವರೆಗೆ 13 ಮಂದಿಯನ್ನು ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ. ಲೆಸ್ಬಾಸ್‌ ದ್ವೀಪದ ಉತ್ತರ ಭಾಗದಲ್ಲಿ ಘಟನೆ ನಡೆದಿದೆ. ಯುದ್ಧಪೀಡಿತ ಸಿರಿಯಾದಿಂದ ಅಪಾರ ಸಂಖ್ಯೆಯ ನಿರಾಶ್ರಿತರು ಯುರೋಪ್‌ ರಾಷ್ಟ್ರಗಳತ್ತ ವಲಸೆ ಹೋಗುತ್ತಿದ್ದಾರೆ.

ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ದೋಣಿಗಳಲ್ಲಿ ತೆರಳುತ್ತಿರುವುದರಿಂದ ಸಮುದ್ರಕ್ಕೆ ಬಿದ್ದು ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಪಶ್ಚಿಮ ಟರ್ಕಿಯ ಕಡಲ ತೀರದಲ್ಲಿ ಸಿರಿಯಾದ ನಾಲ್ಕು ವರ್ಷದ ಬಾಲಕಿಯ ಶವ ಶುಕ್ರವಾರ ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com