ತಾಯಿಗೆ ಹೆರಿಗೆ ಮಾಡಿಸಿದ ಪುಟ್ಟ ಬಾಲಕ

11ನೇ ವರ್ಷದ ಮಗನ ತನ್ನ ತಾಯಿಗೆ ಹೆರಿಗೆ ಮಾಡಿಸಿದ ಅಚ್ಚರಿಯ ಘಟನೆ ಅಮೇರಿಕಾದ ಜಾರ್ಜಿಯಾದಲ್ಲಿ...
ತಾಯಿ ಕೆನ್ಯಾರ್ಡ್ ಹೆರಿಗೆ ಮಾಡಿಸಿದ ಮಗ ಜೇಮ್ಸ್
ತಾಯಿ ಕೆನ್ಯಾರ್ಡ್ ಹೆರಿಗೆ ಮಾಡಿಸಿದ ಮಗ ಜೇಮ್ಸ್
Updated on

ವಾಷಿಂಗ್ಟನ್: 11ನೇ ವರ್ಷದ ಮಗನ ತನ್ನ ತಾಯಿಗೆ ಹೆರಿಗೆ ಮಾಡಿಸಿದ ಅಚ್ಚರಿಯ ಘಟನೆ ಅಮೇರಿಕಾದ ಜಾರ್ಜಿಯಾದಲ್ಲಿ ನಡೆದಿದೆ.

ಜಾರ್ಜಿಯಾ ನಿವಾಸಿಯಾಗಿರುವ ಗರ್ಭಿಣಿ ಕೆನ್ಯಾರ್ಡ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರು ನೀಡಿದ್ದ ದಿನಾಂಕದ ಮೊದಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಮನೆಯಲ್ಲಿ 11 ವರ್ಷದ ಮಗ ಬಿಟ್ಟರೆ ಬೇರೆ ಯಾರು ಇರಲಿಲ್ಲ.

ಈ ವೇಳೆ ಆಕೆ ತನ್ನ ಮಗ ಜೇಮ್ಸ್ ನಿಗೆ 911 ನಂಬರ್ ಗೆ ಕರೆ ಮಾಡಲು ತಿಳಿಸಿದ್ದಾರೆ. ಈ ನಂಬರ್ ಗೆ ಕರೆ ಮಾಡಿದ ಬಾಲಕ ಅಲ್ಲಿಂದ ಬಂದ ಸೂಚನೆಗಳನ್ನು ಕೇಳಿಕೊಂಡು ತಾಯಿಗೆ ಹೆರಿಗೆ ಮಾಡಿಸಿದ್ದಾನೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 
ತನ್ನ ಮಗನ ಈ ಸಾಧನೆ ಬಗ್ಗೆ ತಾಯಿ ಸಂತೋಷವನ್ನು ವ್ಯಕ್ತಪಡಿಸಿದ್ದು, ಇವನು ಮಗ ಮಾತ್ರವಲ್ಲದೇ, ನನ್ನ ವೈದ್ಯನೂ ಆದ ಎಂದು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com