ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧತೆ

ವಿಶ್ವಸಂಸ್ಥೆಯ ನಿಷೇಧ ಮತ್ತು ವಿಶ್ವದ ಹಲವು ರಾಷ್ಟ್ರಗಳ ನಿರಂತರ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಪರೀಕ್ಷೆಯನ್ನು ಮುಂದುವರೆಸಿದ್ದು, ಖಂಡಾಂತರ ಕ್ಷಿಪಣಿ ಪರೀಕ್ಷೆ ವೈಫಲ್ಯದ ಬೆನ್ನಲ್ಲೇ ಐದನೇ ಅಣ್ವಸ್ತ್ರ ಪರೀಕ್ಷೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಂದಾಗಿದ್ದಾರೆ..
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ವುನ್ (ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ವುನ್ (ಸಂಗ್ರಹ ಚಿತ್ರ)
Updated on: 

ಸಿಯೋಲ್: ವಿಶ್ವಸಂಸ್ಥೆಯ ನಿಷೇಧ ಮತ್ತು ವಿಶ್ವದ ಹಲವು ರಾಷ್ಟ್ರಗಳ ನಿರಂತರ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಪರೀಕ್ಷೆಯನ್ನು ಮುಂದುವರೆಸಿದ್ದು, ಖಂಡಾಂತರ  ಕ್ಷಿಪಣಿ ಪರೀಕ್ಷೆ ವೈಫಲ್ಯದ ಬೆನ್ನಲ್ಲೇ ಐದನೇ ಅಣ್ವಸ್ತ್ರ ಪರೀಕ್ಷೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವಂತೆ ಇನ್ನೊಂದು ವಾರದಲ್ಲಿ ಉತ್ತರ ಕೊರಿಯಾ ಪ್ಯೊಂಗ್ ಯಾಂಗ್ ನಿಂದ ಅಣ್ವಸ್ತ್ರ ಪರೀಕ್ಷೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು ದಕ್ಷಿಣ  ಕೊರಿಯಾ ಗಮನಿಸಿರುವಂತೆ ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ನಡೆಯುವ ಸ್ಥಳದಲ್ಲಿ ಚಟುವಟಿಕೆಗಳು ಚುರುಕಾಗಿದ್ದು, ಮತ್ತೊಂದು ಅಣ್ವಸ್ತ್ರ ಪರೀಕ್ಷೆಯ ಸಿದ್ಧತೆ ನಡೆದಿರುವ ಸಾಧ್ಯತೆ  ಹೆಚ್ಚಾಗಿದೆ ಎಂದು ಹೇಳಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಸ್ಥಳದಲ್ಲಿರುವ ವಾಹನಗಳ ಸಂಖ್ಯೆ ಮತ್ತು ಅಲ್ಲಿ ಕೆಲಸಕ್ಕಾಗಿ ತೆರಳುತ್ತಿರುವವರ ಪ್ರಮಾಣ 2 ರಿಂದ 3  ಪಟ್ಟು ಹೆಚ್ಚಾಗಿದೆ ಎಂದು ವಾರ್ತಾ ಸಂಸ್ಥೆಯೊಂದು ವರದಿ ಮಾಡಿದೆ.

ಉತ್ತರ ಕೊರಿಯಾ ಶುಕ್ರವಾರ ನಡೆಸಿದ ಖಂಡಾಂತರ ಕ್ಷಿಪಣಿ ಪರೀಕ್ಷೆ ವಿಫಲವಾಗಿರುವುದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ ವುನ್ ಗೆ ತೀವ್ರ ಹಿನ್ನಡೆಯಾಗಿದ್ದು. ಇದಕ್ಕೆ  ಪರ್ಯಾಯವಾಗಿ ಅಣ್ವಸ್ತ್ರ ಪರೀಕ್ಷೆ ಉತ್ತರ ಕೊರಿಯಾ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಖಂಡಾಂತರ ಕ್ಷಿಪಣಿ ಪರೀಕ್ಷೆ ವಿಫಲವಾದರೂ ಮತ್ತೊಂದು ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧತೆ  ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com