ಭಾರತದಿಂದ ಉಯ್ಘರ್ ಉಗ್ರ ದೋಲ್ಕುನ್ ಗೆ ವೀಸಾ, ಚೀನಾ ಗರಂ

ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ಧರ್ಮಶಾಲಾದಲ್ಲಿ ನಡೆಯಲಿರುವ ವಿಶ್ವ...
ದೋಲ್ಕುನ್ ಇಸಾ
ದೋಲ್ಕುನ್ ಇಸಾ
Updated on: 
ನವದೆಹಲಿ/ಬೀಜಿಂಗ್: ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ಧರ್ಮಶಾಲಾದಲ್ಲಿ ನಡೆಯಲಿರುವ ವಿಶ್ವ ಉಯ್ಫರ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಿಲು ಭಾರತ ವೀಸಾ ನೀಡಿದ್ದು, ಇದಕ್ಕೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಧರ್ಮಶಾಲಾದಲ್ಲಿ ಈ ತಿಂಗಳ ಅಂತ್ಯಕ್ಕೆ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ದೋಲ್ಕುನ್ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಚೀನಾದ ವಾಯುವ್ಯ ಭಾಗದಲ್ಲಿರುವ ಕ್ಸಿನ್​ಜಂಗ್ ಪ್ರಾಂತ್ಯದಲ್ಲಿ ಹಲವಾರು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿರುವ ವರ್ಲ್ಡ್ ಉಯ್ಘರ್ ಕಾಂಗ್ರೆಸ್ ಗೆ ದೋಲ್ಕುನ್ ಇಸಾ ಸೇರಿದ್ದಾರೆ. ಚೀನಾ ದೋಲ್ಕುನ್ ಅವರನ್ನು ಭಯೋತ್ಪಾದಕ ಎಂದು ಘೊಷಿಸಿದೆ. ಈತ ಚೀನಾದ ಹೊರಗಿನಿಂದ ಉಯ್ಘರ್ ಸಮುದಾಯದವರನ್ನು ಸಂಘಟಿಸುತ್ತಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಲಷ್ಕರ್ ಉಗ್ರ ಮಸೂದ್ ಅಜರ್ ಬಂಧನ ಕುರಿತು ಭಾರತ ಸಲ್ಲಿಸಿದ್ದ ಪ್ರಸ್ತಾವನೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಷಯದ ಕುರಿತು ಇನ್ನಷ್ಟು ಮಾಹಿತಿ ಬೇಕು ಎಂದು ಚೀನಾ ವಿಶ್ವಸಂಸ್ಥೆಯಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ದೋಲ್ಕುನ್​ಗೆ ವೀಸಾ ನೀಡಿರುವ ಭಾರತದ ಕ್ರಮ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದೋಲ್ಕುನ್ ವಿರುದ್ಧ ಚೀನಾ ಪೊಲೀಸರು ಮತ್ತು ಇಂಟರ್​ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ಇಂತಹವರನ್ನು ಬಂಧನಕ್ಕೆ ಒಳಪಡಿಸುವುದು ಎಲ್ಲ ರಾಷ್ಟ್ರಗಳ ಕರ್ತವ್ಯ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com