ನನ್ನ ಸಚಿವ ಸಂಪುಟದಲ್ಲಿ ಅರ್ಧದಷ್ಟು ಮಹಿಳೆಯರಿಗೆ ಅವಕಾಶ : ಹಿಲರಿ ಕ್ಲಿಂಟನ್

ಅಮೆರಿಕಾದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಮಾಜಿ ಅಮೆರಿಕಾ ಅಧ್ಯಕ್ಷ ಹಿಲರಿ ಕ್ಲಿಂಟನ್ ಒಂದು ವೇಳೆಸ ನೈಟ್ ಹೌಸ್ ಗೆ ನಾನು ...
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್
Updated on: 

ವಾಷಿಂಗ್ಟನ್: ಅಮೆರಿಕಾದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಮಾಜಿ ಅಮೆರಿಕಾ ಅಧ್ಯಕ್ಷ ಹಿಲರಿ ಕ್ಲಿಂಟನ್ ಒಂದು ವೇಳೆಸ ನೈಟ್ ಹೌಸ್ ಗೆ ನಾನು ಆಯ್ಕೆಯಾದರೇ, ಸಚಿವ ಸಂಪುಟದಲ್ಲಿ ಅರ್ಧದಷ್ಟು ಮಹಿಳಾ ಸಚಿವರಿರುತ್ತಾರೆ ಎಂದು ಹೇಳಿದ್ದಾರೆ.

ವೈಟ್ ಹೌಸ್ ಸಚಿವ ಸಂಪುಟ ನೋಡಲು ಅಮೆರಿಕಾದಂತೆ ಕಾಣುತ್ತದೆ ಎಂದು ಹೇಳಿದ ಅವರು, ಅಮೆರಿಕದಲ್ಲಿ ಶೇ.50 ರಷ್ಟು ಮಹಿಳೆಯರೇ ಇದ್ದಾರೆ, ಹೀಗಾಗಿ ನನ್ನ ಕ್ಯಾಬಿನೇಟ್ ಕೂಡ ಮಹಿಳೆಯರಿಂದಲೇ ಕೂಡಿರುತ್ತದೆ ಎಂಬ ಭರವಸೆ ನೀಡಿದ್ದಾರೆ.

ಇಂಡೀಯನ್ ಅಮೆರಿಕನ್ ಮಹಿಳೆ ನೀರಾ ಟಂಡನ್ ಅವರನ್ನು  ಹಿಲರಿ ಕ್ಲಿಂಟನ್  ಸಂಪುಟದಲ್ಲಿ ನೋಡಲು ಬಯಸುತ್ತೇನೆ ಎಂದು ಹಿಲರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರಕ ಜಾನ್ ಪೊಡೆಸ್ಟೇಯಾ ಹೇಳಿಕೆ ನೀಡಿದ ಬೆನ್ನಲ್ಲೇ ಹಲಿರಿ ಕ್ಲಿಂಟನ್ ಈ ಹೇಳಿಕೆ ನೀಡಿದ್ದಾರೆ.

ನೀರಾ ಟಂಡನ್ ಕಳೆದ 14 ವರ್ಷಗಳಿಂದ ಕ್ಲಿಂಟನ್ ಅವರ ಸೆಂಟರ್ ಫಾರ್ ಪ್ರೊಗ್ರೇಸ್ ಪಕ್ಷದಲ್ಲಿ ದುಡಿಯುತ್ತಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಮುಂದಿನ ಜುಲೈನಲ್ಲಿ ಹಿಲರಿ ಕ್ಲಿಂಟನ್ ಅಮೆರಿಕಾದ  ಬಹುದೊಡ್ಡ ಪಕ್ಷದಿಂದ ಮೊಟ್ಟ ಮೊದಲ ನಾಮ ನಿರ್ದೇಶಿತ  ಅಧ್ಯಕ್ಷೆಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com