ಸ್ವಿಸ್ ಪ್ರಯಾಣಿಕ ರೈಲಿನಲ್ಲಿ ದುಷ್ಕರ್ಮಿಯ ಅಟ್ಟಹಾಸ; ಹಲವರಿಗೆ ಚಾಕು ಇರಿತ

ಸ್ವಿಜರ್ಲ್ಯಾಂಡ್ ನ ಪ್ರಯಾಣಿಕ ರೈಲೊಂದರಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದು, ಸಿಕ್ಕಸಿಕ್ಕ ಪ್ರಯಾಣಿಕರ ಮೇಲೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಸೇಂಟ್ ಗ್ಯಾಲೆನ್ ...
ದುಷ್ಕರ್ಮಿ ಅಟ್ಟಹಾಸ ಮೆರೆದ ಸ್ವಿಜರ್ಲ್ಯಾಂಡ್ ನ ಪ್ರಯಾಣಿಕ ರೈಲು
ದುಷ್ಕರ್ಮಿ ಅಟ್ಟಹಾಸ ಮೆರೆದ ಸ್ವಿಜರ್ಲ್ಯಾಂಡ್ ನ ಪ್ರಯಾಣಿಕ ರೈಲು

ಜಿನಿವಾ: ಸ್ವಿಜರ್ಲ್ಯಾಂಡ್ ನ ಪ್ರಯಾಣಿಕ ರೈಲೊಂದರಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದು, ಸಿಕ್ಕಸಿಕ್ಕ ಪ್ರಯಾಣಿಕರ ಮೇಲೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಸೇಂಟ್ ಗ್ಯಾಲೆನ್ ನಲ್ಲಿ ಶನಿವಾರ ನಡೆದಿದೆ.

ರೈಲಿನಲ್ಲಿದ್ದ 27 ವರ್ಷದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪ್ರಯಾಣಿಕರ ಮೇಲೆ ದಾಳಿ ನಡೆಸಿದ್ದಾನೆ. ಅಲ್ಲದೆ, ಕೆಲ ರಾಸಾಯನಿಕ ದ್ರವ ವಸ್ತುಗಳನ್ನು ಬಳಸಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ಸ್ಥಳೀಯ ಸಮಯದ ಪ್ರಕಾರ ಘಟನೆ ನಿನ್ನೆ ಮಧ್ಯಾಹ್ನ 2.20ರ ಸುಮಾರಿಗೆ ನಡೆದಿದ್ದು, ಚಾಕು ಇರಿತದಿಂದ 12 ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿ ಮಾಡಿದ ವ್ಯಕ್ತಿ ಸ್ವಿಜರ್ಲ್ಯಾಂಡ್ ನ ನಾಗರೀಕನೇ ಆಗಿದ್ದು, ದಾಳಿಯ ಹಿಂದಿರುವ ಪ್ರಮುಖ ಕಾರಣ ಈ ವರೆಗೂ ತಿಳಿದುಬಂದಿಲ್ಲ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇರಿತ ಹಾಗೂ ಬೆಂಕಿ ದಾಳಿಯಿಂದಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ವಕ್ತಾರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com