ಇಟಲಿ ಪ್ರಧಾನಿ ಹುದ್ದೆಗೆ ಮಟ್ಟೆಯೊ ರೆಂಜಿ ರಾಜಿನಾಮೆ

ಇಟಲಿ ಪ್ರಧಾನಿ ಮಟ್ಟೆಯೊ ರೆಂಜಿ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಪಾದನೆಗಳ ವಿರುದ್ಧ ಜನಾಭಿಪ್ರಾಯ ಸಂಗ್ರಹವಾದ ಹಿನ್ನೆಲೆಯಲ್ಲಿ ಪ್ರಧಾನಿ...
ಮಟ್ಟೆಯೊ ರೆಂಜಿ
ಮಟ್ಟೆಯೊ ರೆಂಜಿ
Updated on
ರೋಮ್: ಇಟಲಿ ಪ್ರಧಾನಿ ಮಟ್ಟೆಯೊ ರೆಂಜಿ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಪಾದನೆಗಳ ವಿರುದ್ಧ ಜನಾಭಿಪ್ರಾಯ ಸಂಗ್ರಹವಾದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರೆಂಜಿ ರಾಜಿನಾಮೆ ಸಲ್ಲಿಸಿದ್ದಾರೆ. 
ಭಾನುವಾರ ಇಟಲಿ ಸಂಸತ್ತಿನಲ್ಲಿ ಸಂವಿಧಾನಿಕ ತಿದ್ದುಪಡಿಗಾಗಿ ಜನಾಭಿಪ್ರಾಯ ಸಂಗ್ರಹಣೆ ನಡೆದಿದ್ದು ಇದರಲ್ಲಿ ರೆಂಜಿ ಪ್ರತಿಪಾದನೆಗೆ ಸೋಲಾಗಿದೆ. ಈ ಫಲಿತಾಂಶ ಹೊರಬಿದ್ದ ಕೆಲ ಗಂಟೆಗಳಲ್ಲಿ ರೆಂಜಿ ಪ್ರಧಾನಿ ಹುದ್ದೆಗೆ ರಾಜಿನಾಮೆ ಘೋಷಿಸಿದ್ದಾರೆ. 
ರೆಂಜಿ ಅವರು ಇಟಲಿ ಅಧ್ಯಕ್ಷ ಸೆರ್ಗಿಯೊ ಮಾಟರೆಲ್ಲರನ್ನು ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ನೈತಿಕ ಹೊಣೆ ಹೊತ್ತು ರೆಂಜಿ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿರುವುದಾಗಿ ರೆಂಜಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com