ಅಮೆರಿಕನ್ನರ ಉದ್ಯೋಗ ಆಕ್ರಮಿಸಲು ವಲಸಿಗರಿಗೆ ಅವಕಾಶ ನೀಡುವುದಿಲ್ಲ: ಟ್ರಂಪ್

ಅಮೆರಿಕಾದಲ್ಲಿರುವ ವಿದೇಶಿ ಉದ್ಯೋಗಿಗಳ ಬಗ್ಗೆ ಮತ್ತೆ ಗುಡುಗಿರುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರ ಉದ್ಯೋಗಗಳನ್ನು ಕಸಿಯಲು ಹೆಚ್-1 ಬಿ ವೀಸಾ ಪಡೆದವರಿಗೆ ಅವಕಾಶ ನೀಡುವುದಿಲ್ಲ
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಅಮೆರಿಕಾದಲ್ಲಿರುವ ವಿದೇಶಿ ಉದ್ಯೋಗಿಗಳ ಬಗ್ಗೆ ಮತ್ತೆ ಗುಡುಗಿರುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರ ಉದ್ಯೋಗಗಳನ್ನು ಕಸಿಯಲು ಹೆಚ್-1 ಬಿ ವೀಸಾ ಪಡೆದವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. 
ಅಮೆರಿಕನ್ನರಿಗಿಂತ ಭಾರತೀಯರು ಹಾಗೂ ಇತರ ವಿದೇಶಿಗರೇ ಹೆಚ್ಚು ಕಾರ್ಯನಿರ್ವಹಿಸುತ್ತಿರುವ ಡಿಸ್ನಿ ವರ್ಲ್ಡ್ ನಂತಹ ಕಂಪನಿಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿರುವ ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1   ವೀಸಾ ಪಡೆದವರಿಂದ ಅಮೆರಿಕಾದವರನ್ನು ರಕ್ಷಿಸಲು ಹೋರಾಡುತ್ತೇವೆ, ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆಯಲ್ಲೂ ನಾನು ಅಮೆರಿಕಾದ ಉದ್ಯೋಗಿಗಳೊಂದಿಗೇ ಇದ್ದೆ. ಈ ವರೆಗೂ ಅಮೆರಿಕನ್ನರ ಉದ್ಯೋಗಗಳಿಗೆ ವಿದೇಶಿಗರನ್ನು ಕರೆತರಲಾಗುತ್ತಿತ್ತು. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದಿಲ್ಲ ಎಂದು ಅಮೆರಿಕಾದ ಜನತೆಗೆ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com