ಸೋಮಾಲಿ: ಆತ್ಮಾಹುತಿ ಬಾಂಬ್ ದಾಳಿಗೆ 16 ಮಂದಿ ಬಲಿ

ಸೋಮಾಲಿ ರಾಜಧಾನಿ ಮೊಗದೀಶು ಬಂದರು ಸಮೀಪ ಭಾನುವಾರ ಬೆಳಗ್ಗೆ ನಡೆದ ಟ್ರಕ್ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 16 ಮಂದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊಗದೀಶು( ಸೋಮಾಲಿ: ಸೋಮಾಲಿ ರಾಜಧಾನಿ  ಮೊಗದೀಶು ಬಂದರು ಸಮೀಪ ಭಾನುವಾರ ಬೆಳಗ್ಗೆ ನಡೆದ ಟ್ರಕ್ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 16 ಮಂದಿ ಸಾವನ್ನಪ್ಪಿದ್ದಾರೆ

ದಾಳಿಯಲ್ಲಿ ಸುಮಾರು 42 ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದ್ದಕ್ಕಿದ್ದಂತೆ ಸಂಭವಿಸಿದ ಸ್ಪೋಟದಿಂದಾಗಿ ಆಕಾಶದೆತ್ತರಕ್ಕೂ ದಟ್ಟಹೊಗೆ ಆವರಿಸಿಕತೊಂಡಿತು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಆಲ್ ಖೈದಾ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಯಿತು ಎಂದು ಹೇಳಿಕೊಂಡಿದೆ. ಮೊಗದೀಶು ಬಂದರು ಸಮೀಪ ಸ್ಫೋಟ ಸಂಭವಿಸಿದೆ, ಬಾಂಬರ್ ಗಳು ಹೆಚ್ಚು ಜನಸಂಖ್ಯೆ ಇರುವ ಪ್ರದೇಶವನ್ನು ಸ್ಫೋಟಕ್ಕೆ ಆರಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com